ಅಧಿವೇಶನದಲ್ಲಿ ಭಾಗವಹಿಸಲು ವ್ಹೀಲ್ ಚೇರ್​​ನಲ್ಲಿ ಮಧ್ಯಾಹ್ನದ ವೇಳೆ ಅಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Mar 11, 2025 | 4:06 PM

ಕಳೆದ ಶುಕ್ರವಾರ ದಾಖಲೆಯ ತಮ್ಮ 16ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಕೂತುಕೊಂಡೇ ಅದನ್ನು ಮಂಡಿಸಲು ಸಭಾಧ್ಯಕ್ಷರಿಂದ ಅನುಮತಿ ಕೋರಿದ್ದರು. 15-20 ದಿನಗಳ ಹಿಂದೆ ಮಾಧ್ಯಮದವರೊಬ್ಬರು ಮಂಡಿನೋವಿನ ಬಗ್ಗೆ ವಿಚಾರಿಸಿದಾಗ ಸಿದ್ದರಾಮಯ್ಯ, ಕ್ರಮೇಣ ವಾಸಿಯಾಗುತ್ತಿದೆ, ಇನ್ನೊಂದು ವಾರದಲ್ಲಿ ಸಹಾಯವಿಲ್ಲದೆ ನಡೆದಾಡಬಹುದು ಅಂತ ಹೇಳಿದ್ದರು.

ಬೆಂಗಳೂರು, ಮಾರ್ಚ್ 11: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಧ್ಯಾಹ್ನದ ವೇಳೆ ವಿಧಾನ ಮಂಡಲದ ಅಧಿವೇಶನದಲ್ಲಿ (Assembly session) ಭಾಗಿಯಾಗಲು ಆಗಮಿಸಿದರು. ಮಂಡಿನೋವು ಇನ್ನೂ ಸಂಪೂರ್ಣವಾಗಿ ವಾಸಿಯಾಗದ ಕಾರಣ ವಿಧಾನಸೌಧದವರೆಗೆ ಕಾರಲ್ಲಿ ಬಂದು ಅಲ್ಲಿಂದ ವ್ಹೀಲ್ ಚೇರ್ ಮೂಲಕ ಸದನದ ಕಡೆ ಹೋದರು. ಮುಖ್ಯಮಂತ್ರಿಯವರು ತಮ್ಮೊಂದಿಗೆ ವಾಕಿಂಕ್ ಸ್ಟಿಕ್ ಸಹ ಕ್ಯಾರಿ ಮಾಡುತ್ತಿದ್ದಾರೆ, ಅದರೆ ಅದನ್ನು ಬಳಸೋದು ಬಹಳ ಕಡಿಮೆ. ಕಾರಿಂದ ಇಳಿಯುವಾಗ ಪ್ರಾಯಶಃ ಸ್ಟಿಕ್ ಬಳಸುತ್ತಾರೆ ಅನಿಸುತ್ತದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಟಿ ಶಬಾನಾ ಆಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ ಸಿದ್ದರಾಮಯ್ಯ