ಯಾದಗಿರಿ: ಆರೋಗ್ಯ ಆವಿಷ್ಕಾರ ಕಾರ್ಯಕ್ರಮದಲ್ಲಿ ಖರ್ಗೆಯವರನ್ನು ಮೊದಲು ಕೂರುವಂತೆ ಹೇಳಿದ ಸಿದ್ದರಾಮಯ್ಯ

Updated on: Jun 14, 2025 | 3:17 PM

ಮಲ್ಲಿಕಾರ್ಜುನ ಖರ್ಗೆ ಪ್ರಾಯಶಃ ತಣ್ಣೀರು ಕುಡಿಯುವುದು ಬಿಟ್ಟಿದ್ದಾರೆ ಇಲ್ಲವೇ ಗಂಟಲು ಸೋಂಕಿನಿಂದ ಬಳಲುತ್ತಿರಬಹುದು. ವೇದಿಕೆಯ ಮೇಲೆ ಕುಡಿಯುವ ನೀರು ತಂದಾಗ ಅವರು ಗ್ಗಾಸ್ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಅವರ ಹಿಂದೆ ಕುಳಿತ್ತಿದ್ದ ಅಂಗರಕ್ಷಕರೊಬ್ಬರು ಫ್ಲಾಸ್ಕ್​ ನಿಂದ ಒಂದು ಸ್ಟೀಲ್ ಗ್ಲಾಸಲ್ಲಿ ನೀರು ಕೊಡುತ್ತಾರೆ, ಬಿಸಿ ಜಾಸ್ತಿಯಿದ್ದ ಕಾರಣ ಖರ್ಗೆ ಅದರಲ್ಲಿ ತಣ್ಣೀರು ಬೆರೆಸುತ್ತಾರೆ, ಅದರೆ ಸಿದ್ದರಾಮಯ್ಯ ತಮ್ಮ ಮುಂದಿದ್ದ ನೀರಿನ ಬಾಟಲ್​ ಎತ್ತಿಕೊಂಡು ಗಟಗಟನೆ ಕುಡಿದುಬಿಡುತ್ತಾರೆ.

ಯಾದಗಿರಿ, ಜೂನ್ 14: ಬಿಸಿಲುನಾಡು ಎಂದು ಕರೆಸಿಕೊಳ್ಳುವ ಯಾದಗಿರಿಯಲ್ಲಿ ಕಳೆದ ವಾರಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಬಿಸಿಲಿನ ತಾಪ ಕಡಿಮೆಯಾಗಿದೆ. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ (district stadium) ಆಯೋಜಿಸಲಾಗಿದ್ದ ಅರೋಗ್ಯ ಆವಿಷ್ಕಾರ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮೊದಲಾದವರು ಭಾಗಿಯಾಗಿದ್ದರು, ಗಣ್ಯರೆಲ್ಲ ವೇದಿಕೆಗೆ ಮೇಲೆ ಆಗಮಿಸಿದ ಬಳಿಕ ಸಿದ್ದರಾಮಯ್ಯ ತಾವು ಆಸೀನರಾಗುವ ಮೊದಲು ಖರ್ಗೆಯವರ ಕೈಹಿಡಿದು ಕುರ್ಚಿಯ ಮೇಲೆ ಕೂರುವಂತೆ ಹೇಳುತ್ತಾರೆ.

ಇದನ್ನೂ ಓದಿ:   ವಿಳಂಬ ಮಾಡದೆ ಲೋಕಸಭೆಗೆ ಉಪಸಭಾಪತಿ ಆಯ್ಕೆ ಮಾಡುವಂತೆ ಪ್ರಧಾನಿ ಮೋದಿಗೆ ಖರ್ಗೆ ಪತ್ರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ