ರಾಜ್ಯದ ಜನತೆ ಶಾಂತಿಪ್ರಿಯರು, ಇಲ್ಲಿ ಬುಲ್ಲೆಟ್ ಪ್ರೂಫ್ ಜಾಕೆಟ್ ಅಗತ್ಯವಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ರಾಜ್ಯದ ಜನತೆ ಶಾಂತಿಪ್ರಿಯರು, ಇಲ್ಲಿ ಬುಲ್ಲೆಟ್ ಪ್ರೂಫ್ ಜಾಕೆಟ್ ಅಗತ್ಯವಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2024 | 3:54 PM

ಉಡುಪಿಯಲ್ಲಿ ಕಡಲ್ಕೊರೆತದಿಂದ ಉಂಟಾಗುತ್ತಿರುವ ಸಮಸ್ಯೆಯ ಪರಿಹಾರಕ್ಕಾಗಿ ₹ 5 ರಿಂದ ₹10 ಕೋಟಿ ಬಿಡುಗಡೆ ಮಾಡಿಸಿಕೊಂಡು ಬರೋದಾಗಿ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದಲ್ಲಿ ಕೆಲವು ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗೆ ಉನ್ನತೀಕರಿಸುವ ಪ್ರಕ್ರಿಯೆ ಜಾರಿಯಲ್ಲಿದೆ, ವರದಿ ಬಂದ ತಕ್ಷಣ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು.

ಉಡುಪಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಭಾಷಣ ಮಾಡುವಾಗ ಬುಲೆಟ್ ಪ್ರೂಫ್ ಜಾಕೆಟ್ ಧರಿಸದೆ ಮಾತಾಡಿದ್ದನ್ನು ಶ್ಲಾಘಿಸಿದರು. ಕನ್ನಡನಾಡಿನ ಜನತೆ ಶಾಂತಿಪ್ರಿಯರು ಮತ್ತು ಹಿಂಸೆಯ ವಿರೋಧಿಗಳು. ಅವರನ್ನು ಉದ್ದೇಶಿಸಿ ಮಾತಾಡುವಾಗ ಬುಲ್ಲೆಟ್ ಪ್ರೂಫ್ ಜಾಕೆಟ್ ಧರಿಸುವ ಅವಶ್ಯಕತೆ ಇರೋದಿಲ್ಲ. ಮತ್ತೊಂದು ಉಲ್ಲೇನೀಯ ಸಂಗತಿಯೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ಧೈರ್ಯಶಾಲಿ ವ್ಯಕ್ತಿ ಎಂದು ಲಕ್ಷ್ಮಿ ಹೇಳಿದರು. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಹೇಳಿದ ಮಾತು ಕೇಳಲ್ಲ ಅಂತ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿರುವ ಬಗ್ಗೆ ಹೇಳಿದಾಗ ಲಕ್ಷ್ಮಿಯವರು ಹಕ್ಕುಚ್ಯುತಿಯ ವ್ಯಾಖ್ಯಾನವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅಧಿಕಾರಿಗಳೊಂದಿಗೆ ಸಭೆಯನ್ನು ಶಾಸಕರು ತಮಗಿಷ್ಟ ಬಂದ ಜಾಗದಲ್ಲಿ ಇಲ್ಲವೇ ತಮ್ಮ ಮನೆಯಲ್ಲಿ ನಡೆಸಲಾಗುವುದಿಲ್ಲ, ಶಿಷ್ಟಾಚಾರದ ಪ್ರಕಾರ ಅದು ಒಂದು ಸರ್ಕಾರೀ ಕಚೇರಿಯಲ್ಲೇ ನಡೆಯಬೇಕು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಹೇಳದೆ ಆ ಯವ್ವ ಏನೇನೋ ಮಾತಾಡ್ತಾರೆ ಎಂದು ಟೀಕಿಸಿದ ರಮೇಶ್ ಜಾರಕಿಹೊಳಿ