ರೂಟೀನ್ ಚೆಕಪ್​ಗಾಗಿ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Updated on: Jul 07, 2025 | 2:44 PM

ನಮ್ಮ ಗಣ್ಯರು ತಪಾಸಣೆ ಮತ್ತು ಅನಾರೋಗ್ಯ ಉಂಟಾದಾಗ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗೋದು ರಾಜ್ಯದಲ್ಲಿರುವ ಸರ್ಕಾರೀ ಅಸ್ಪತ್ರೆಗಳ ಸ್ಥಿತಿಗತಿಗಳನ್ನು ಸೂಚ್ಯವಾಗಿ ವಿವರಿಸುತ್ತದೆ. ಕೆಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯ ಆಸ್ಪತ್ರೆ ಮತ್ತು ಉಳಿದೆಲ್ಲ ಸರ್ಕಾರೀ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳ ಸ್ತರ ಬದಲಾಗಬೇಕಾದರೆ, ಸಿಎಂ ಆದಿಯಾಗಿ ಮಂತ್ರಿ ಮತ್ತು ಶಾಸಕರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಬದಲು ಸರ್ಕಾರೀ ಆಸ್ಪತ್ರೆಗಳಿಗೆ ಹೋಗಬೇಕು.

ಬೆಂಗಳೂರು, ಜುಲೈ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಿಢೀರನೆ ನಗರದ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ (private hospital) ತಮ್ಮ ಕಾನ್ವಾಯ್​ಯೊಂದಿಗೆ ತೆರಳಿದರು. ನಮ್ಮ ಬೆಂಗಳೂರು ವರದಿಗಾರ ನೀಡುವ ಮಾಹಿತಿ ಪ್ರಕಾರ ಮುಖ್ಯಮಂತ್ರಿಯವರು ರೂಟೀನ್ ಆರೋಗ್ಯ ತಪಾಸಣೆಗೆಂದು ಹೋಗಿದ್ದಾರೆ. ಹಾಗೆ ನೋಡಿದರೆ ಮುಖ್ಯಮಂತ್ರಿಯವರಿಗೆ ಯಾವುದೇ ಕಾಯಿಲೆ ಇಲ್ಲ, ಅವರೇ ಹೇಳಿಕೊಂಡಿರುವಂತೆ ಸುಮಾರು 17-18 ವರ್ಷಗಳ ಹಿಂದೆ ಅವರ ಹೃದಯದ ರಕ್ತನಾಳವೊಂದಕ್ಕೆ ಸ್ಟೆಂಟ್ ಅಳವಡಿಸಲಾಗಿದೆ. ಅದೆಲ್ಲ ಸರಿ, ಆರೋಗ್ಯ ತಪಾಸಣೆಗೆ ಹೋಗಬೇಕಾದರೂ ಅವರು ಬೆಂಗಾವಲು ಪಡೆಯಾಗಿ 12-15 ವಾಹನಗಳನ್ನು ಜೊತೆಗೆ ಒಯ್ಯಬೇಕೇ ಅನ್ನೋದು ಪ್ರಶ್ನೆ.

ಇದನ್ನೂ ಓದಿ:  ಸಿದ್ದರಾಮಯ್ಯಗೆ ಹೈಕಮಾಂಡ್ ಮಹತ್ವದ ಹುದ್ದೆ: ರಾಷ್ಟ್ರ ರಾಜಕಾರಣ, ಅಂತೆ-ಕಂತೆಗಳಿಗೆ ತೆರೆ ಎಳೆದ ಸಿಎಂ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ