ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು:ರಾಜಣ್ಣ ಸ್ಫೋಟಕ ಹೇಳಿಕೆ

Updated on: Sep 15, 2026 | 9:28 PM

ಕರ್ನಾಟಕ ಕಾಂಗ್ರೆಸ್​​ ಮನೆಯೊಳಗೆ ಷಡ್ಯಂತ್ರ, ಪ್ರತಿತಂತ್ರದ ಮಾತುಗಳು ಅಲ್ಲಲ್ಲಿ ಕೇಳಿ ಬರ್ತಿದೆ. ಇಡಿ ದಾಳಿ ಪ್ರಕರಣದಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಅಂತೂ ನಮ್ಮವರೇ ದೂರು ಕೊಟ್ಟಿರಬಹುದು ಅಂತಾ ಅನುಮಾನವ್ಯಕ್ತಪಡಿಸಿದ್ರು. ಸಿಎಂ ಡಿಕೆಗೂ ಹೇಳಿದ್ದೀನಿ ಅಂದಿದ್ರು. ಆದ್ರೆ ಇದೀಗ ಮಾಜಿ ಸಚಿವ ಕೆ.ಎನ್.ರಾಜಣ್ಣ, ಸತೀಶ್​ ಜಾರಕಿಹೊಳಿ ಪ್ರಕರಣ ಉಲ್ಲೇಖಿಸ್ತಾನೆ, ಮುಡಾ ಕೇಸ್​ನಲ್ಲೂ ದೂರು ಕೊಟ್ಟಿರೋದು ಕಾಂಗ್ರೆಸ್​​ನವರೇ ಅಂತಾ ಹೊಸ ಬಾಂಬ್​ ಸಿಡಿಸಿರೋದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

ಬೆಂಗಳೂರು, (ಸೆಪ್ಟೆಂಬರ್ 15): ಕರ್ನಾಟಕ ಕಾಂಗ್ರೆಸ್​​ ಮನೆಯೊಳಗೆ ಷಡ್ಯಂತ್ರ, ಪ್ರತಿತಂತ್ರದ ಮಾತುಗಳು ಅಲ್ಲಲ್ಲಿ ಕೇಳಿ ಬರ್ತಿದೆ. ಇಡಿ ದಾಳಿ ಪ್ರಕರಣದಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಅಂತೂ ನಮ್ಮವರೇ ದೂರು ಕೊಟ್ಟಿರಬಹುದು ಅಂತಾ ಅನುಮಾನವ್ಯಕ್ತಪಡಿಸಿದ್ರು. ಸಿಎಂ ಡಿಕೆಗೂ ಹೇಳಿದ್ದೀನಿ ಅಂದಿದ್ರು. ಆದ್ರೆ ಇದೀಗ ಮಾಜಿ ಸಚಿವ ಕೆ.ಎನ್.ರಾಜಣ್ಣ, ಸತೀಶ್​ ಜಾರಕಿಹೊಳಿ ಪ್ರಕರಣ ಉಲ್ಲೇಖಿಸ್ತಾನೆ, ಮುಡಾ ಕೇಸ್​ನಲ್ಲೂ ದೂರು ಕೊಟ್ಟಿರೋದು ಕಾಂಗ್ರೆಸ್​​ನವರೇ ಅಂತಾ ಹೊಸ ಬಾಂಬ್​ ಸಿಡಿಸಿರೋದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

ವಿಷ್ಯ ಏನು ಅಂದ್ರೆ, ಸಚಿವ ಸತೀಶ್ ಜಾರಕಿಹೊಳಿನೂ ಯಾರು ದೂರು ಕೊಟ್ರೂ ಅಂತಾ ಹೆಸರು ಸಮೇತ ರಿವೀಲ್ ಮಾಡೋಕೆ ತಯಾರಿಲ್ಲ. ಮತ್ತೊಂದ್ಕಡೆ ಮುಡಾ ಕೇಸ್​ನಲ್ಲೂ ಕಾಂಗ್ರೆಸ್​​ನವರೇ ದೂರು ಕೊಟ್ಟಿರೋದು ಅಂತಿರೋ ಮಾಜಿ ಸಚಿವ ಕೆ.ಎನ್​.ರಾಜಣ್ಣನೂ ಹೆಸರು ರಿವೀಲ್ ಮಾಡ್ತಿಲ್ಲ, ಆದ್ರೆ ಯಾರೋ ಬಲವಾದವರು ಇದ್ದಾರೆ ಅಂತಿದ್ದಾರೆ.

Published on: Sep 15, 2026 09:28 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More