ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್: ಕಾಂಗ್ರೆಸ್ನಲ್ಲಿ ಸಂಚಲನ
ಸಿಎಂ ಕುರ್ಚಿ ಮುಸುಕಿನ ಗುದ್ದಾಟ ಹಾಗೂ ಸಂಪುಟ ವಿಸ್ತರಣೆಯ ರಾಜಕೀಯ ಪ್ರಹಸನಗಳು. ಹೀಗೆ ಕರ್ನಾಟಕ ಕಾಂಗ್ರೆಸ್ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ಹೈಕಮಾಂಡ್ನಿಂದ ಬುಲಾವ್ ಬಂದಿದೆ. ಹೌದು... ಮೇ 26ರಂದು ದೆಹಲಿಗೆ (New Delhi) ಬರುವಂತೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಕರೆ ನೀಡಿದೆ. ಮೇಲ್ನೋಟಕ್ಕೆ ರಾಜ್ಯಸಭಾ ಚುನಾವಣೆ ಸಂಬಂಧ ಚರ್ಚಿಸಲು ಈ ಆಹ್ವಾನ ನೀಡಿರಬಹುದು ಎನ್ನಲಾಗಿದೆ. ಆದ್ರೆ, ಇದೇ ವೇಳೆ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಬೆಂಗಳೂರು, (ಮೇ 24): ಸಿಎಂ ಕುರ್ಚಿ ಮುಸುಕಿನ ಗುದ್ದಾಟ ಹಾಗೂ ಸಂಪುಟ ವಿಸ್ತರಣೆಯ ರಾಜಕೀಯ ಪ್ರಹಸನಗಳು. ಹೀಗೆ ಕರ್ನಾಟಕ ಕಾಂಗ್ರೆಸ್ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ಹೈಕಮಾಂಡ್ನಿಂದ ಬುಲಾವ್ ಬಂದಿದೆ. ಹೌದು… ಮೇ 26ರಂದು ದೆಹಲಿಗೆ (New Delhi) ಬರುವಂತೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಕರೆ ನೀಡಿದೆ. ಮೇಲ್ನೋಟಕ್ಕೆ ರಾಜ್ಯಸಭಾ ಚುನಾವಣೆ ಸಂಬಂಧ ಚರ್ಚಿಸಲು ಈ ಆಹ್ವಾನ ನೀಡಿರಬಹುದು ಎನ್ನಲಾಗಿದೆ. ಆದ್ರೆ, ಇದೇ ವೇಳೆ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ನಿರ್ಮಾಣವಾಗಿರುವ ಗೊಂದಲಗಳನ್ನ
ಕೇರಳದಲ್ಲಿ ಸರ್ಕಾರ ರಚನೆ ನಂತರ ಗಮನ ಹರಿಸುವುದಾಗಿ ಹೈಕಮಾಂಡ್ ಹೇಳಿತ್ತು. ಅದರಂತೆ ಇದೀಗ ರಾಜ್ಯದತ್ತ ಚಿತ್ತ ಹರಿಸಿದ್ದು, ಮಂಗಳವಾರ ದೆಹಲಿಗೆ ಬರುವಂತೆ ಸಿಎಂ ಹಾಗೂ ಡಿಸಿಎಂಗೆ ಆಹ್ವಾನ ನೀಡಿದೆ. ಹೀಗಾಗಿ ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.


