ಇಲ್ಲಿ ಕಾಂಗ್ರೆಸ್​-ಜೆಡಿಎಸ್ ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2024 | 7:43 PM

ಮಂಡ್ಯ ಜಿಲ್ಲೆಯ ಮದ್ದೂರು ಪುರಸಭೆ ಚುನಾವಣೆಯಲ್ಲಿ ಬಹುಮತ ಇಲ್ಲದಿದ್ರೂ ಕಾಂಗ್ರೆಸ್​ ತೆಕ್ಕೆಗೆ ಬಿದ್ದಿದೆ. ಇಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಇದ್ದು, ಅಧ್ಯಕ್ಷ- ಉಪಾಧ್ಯಕ್ಷ ಪಡೆದುಕೊಂಡಿದ್ದು, ಬಿಜೆಪಿಗೆ ಶಾಕ್​ ಉಂಟಾಗಿದೆ. ಮದ್ದೂರು ಪುರಸಭೆ ಅಧ್ಯಕ್ಷರಾಗಿ ಕೋಕಿಲಾ ಅರುಣ್ ಮತ್ತು ಉಪಾಧ್ಯಕ್ಷರಾಗಿ ಪ್ರಸನ್ನ ಆಯ್ಕೆ ಆಗಿದ್ದಾರೆ.

ಮಂಡ್ಯ, ಸೆಪ್ಟೆಂಬರ್​ 09: ಜಿಲ್ಲೆಯ ಮದ್ದೂರು ಪುರಸಭೆ ಕಾಂಗ್ರೆಸ್ (congress) ತೆಕ್ಕೆಗೆ ಬಿದ್ದಿದೆ. ಬಹುಮತ ಇಲ್ಲದಿದ್ದರೂ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ವಶವಾಗಿದೆ. ಇಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಇದ್ದು, ಅಧ್ಯಕ್ಷ- ಉಪಾಧ್ಯಕ್ಷ ಪಡೆದುಕೊಂಡಿದ್ದು, ಬಿಜೆಪಿಗೆ ಶಾಕ್​ ಉಂಟಾಗಿದೆ. ಮದ್ದೂರು ಪುರಸಭೆ ಅಧ್ಯಕ್ಷರಾಗಿ ಕೋಕಿಲಾ ಅರುಣ್ ಮತ್ತು ಉಪಾಧ್ಯಕ್ಷರಾಗಿ ಪ್ರಸನ್ನ ಆಯ್ಕೆ ಆಗಿದ್ದಾರೆ. 23 ಸದಸ್ಯರನ್ನು ಹೊಂದಿರುವ ಮದ್ದೂರು ಪುರಸಭೆ, ಸ್ಥಳೀಯ ಶಾಸಕ ಮತ್ತು ಸಂಸದರಿಗೆ ಮತದಾನ ಹಕ್ಕು ನೀಡಲಾಗಿತ್ತು. ಕೋಕಿಲಾ ಅರುಣ್ ಪರ ಮೂವರು ಕಾಂಗ್ರೆಸ್ ಸದಸ್ಯರು, ಓರ್ವ ಬಿಜೆಪಿ, ಜೆಡಿಎಸ್​ ಪಕ್ಷದ 6 ಸದಸ್ಯರು ಹಾಗೂ ನಾಲ್ವರು ಪಕ್ಷೇತರರು ಹಾಗೂ ಓರ್ವ ಶಾಸಕನ ಬೆಂಬಲ ಇತ್ತು. ಕಾಂಗ್ರೆಸ್​ ಪರ 15 ಮತ, ಜೆಡಿಎಸ್ ಪರ 8 ಮತಗಳು ಬಂದಿದ್ದು, ಮತದಾನದ ವೇಳೆ ಓರ್ವ ಜೆಡಿಎಸ್​ ಸದಸ್ಯ, ಸಂಸದ ಗೈರಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.