ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಭಾಗ್ಯಲಕ್ಷ್ಮೀ ಬಾಂಡ್ ಪಡೆದಿದ್ದವರಿಗೆ ಹಣ ಹಾಕಲು ಸಿದ್ಧತೆ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 2 ದಿನದಿಂದ ಬಾಂಡ್ ಮೆಚ್ಯುರಿಟಿ ಆದ ಬಗ್ಗೆ ಲೆಕ್ಕ ಮಾಡುತ್ತಿದ್ದಾರೆ. ಮೆಚ್ಯುರಿಟಿ ಎಷ್ಟು ಜನರದ್ದು ಆಗಿದೆಯೋ ಅವರಿಗೆ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2024 | 5:41 PM

ಬೆಳಗಾವಿ, ಸೆಪ್ಟೆಂಬರ್​​ 09: 2 ದಿನದಿಂದ ಬಾಂಡ್ ಮೆಚ್ಯುರಿಟಿ ಆದ ಬಗ್ಗೆ ಲೆಕ್ಕ ಮಾಡುತ್ತಿದ್ದಾರೆ. ಮೆಚ್ಯುರಿಟಿ ಎಷ್ಟು ಜನರದ್ದು ಆಗಿದೆಯೋ ಅವರಿಗೆ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ (Lakshmi Hebbalkar) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಚೆ ಭಾಗ್ಯಲಕ್ಷ್ಮೀ ಅಂತಾ ಅನೌನ್ಸ್ ಮಾಡಿದ್ದರು. ಈಗ ಅದರ ಹೆಸರು ಬದಲಾಗಿ ಸುಕನ್ಯಾ ಸಮೃದ್ಧಿ ಯೋಜನೆಯಾಗಿದೆ. ಈ ಹಿಂದೆ ಎಲ್‌ಐಸಿಯವರು ಬಾಂಡ್ ಕೊಡುತ್ತಿದ್ದರು. ಈಗ ಅಂಚೆ ಕಚೇರಿಯಿಂದ ಬಾಂಡ್ ಕೊಡುತ್ತಾರೆ ಎಂದಿದ್ದಾರೆ.

ಹೆಣ್ಣುಮಗುವಿನ ಜನ್ಮ ಆದ ಕೂಡಲೇ ಇಂತಿಷ್ಟು ಹಣ ಇಡಲಾಗುತ್ತೆ. ಭಾಗ್ಯಲಕ್ಷ್ಮೀ ಹೆಸರು ಬದಲಾಗಿರಬಹುದು, ಆದರೆ ಯೋಜನೆ ಒಂದೇ. 19 ವಯಸ್ಸಿಗೆ ವಿದ್ಯಾಭ್ಯಾಸಕ್ಕೆ ಬೇಕಾದ್ರೆ ಒಂದೂವರೆ ಲಕ್ಷ ಕೊಡುತ್ತೇವೆ. 21 ವಯಸ್ಸಿಗೆ ಬೇಕಾದ್ರೆ 1 ಲಕ್ಷ 80 ಸಾವಿರ ಹಣ ಕೊಡುತ್ತೇವೆ. ಈಗ 2 ಲಕ್ಷ ಫಲಾನುಭವಿಗಳಿಗೆ ಹಣ ಕೊಡುವುದಕ್ಕೆ ತಯಾರಿ ಆಗಿದೆ. ಇಲಾಖೆಯಿಂದ ಶೀಘ್ರದಲ್ಲೇ ಬಾಂಡ್ ಕೊಡುವ ಕಾರ್ಯಕ್ರಮ ಆಗುತ್ತೆ. ಸರ್ಕಾರಗಳು ಬದಲಾಗುತ್ತವೆ, ಆದರೆ ಯೋಜನೆ ಉಳಿದುಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us