AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ದೇಶಭಕ್ತಿಯನ್ನು ಸಹಿಸಿಕೊಳ್ಳುವ ಮನಸ್ಥಿತಿ ಕಾಂಗ್ರೆಸ್ ಪಕ್ಷಕ್ಕಿಲ್ಲ: ಎಸ್​ಎನ್ ಚನ್ನಬಸಪ್ಪ, ಶಾಸಕ

ಒಂದು ದೇಶಭಕ್ತಿಯನ್ನು ಸಹಿಸಿಕೊಳ್ಳುವ ಮನಸ್ಥಿತಿ ಕಾಂಗ್ರೆಸ್ ಪಕ್ಷಕ್ಕಿಲ್ಲ: ಎಸ್​ಎನ್ ಚನ್ನಬಸಪ್ಪ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 27, 2025 | 6:17 PM

Share

ಶಿವಕುಮಾರ್ ದೇಶಭಕ್ತಿ ಹಾಡಿದರೆ ಅದರಲ್ಲಿ ತಪ್ಪೇನಿದೆ? ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಹಾಡಿದರೆ ಯಾಕೆ ಕಾಂಗ್ರೆಸ್ ನಾಯಕರಿಗೆ ಮೈಯೆಲ್ಲ ಉರಿಯಬೇಕು? ಅದು ದೇಶಭಕ್ತಿ ಗೀತೆ ಮತ್ತು ಭಾರತೀಯರೆಲ್ಲ ಪ್ರತಿದಿನ ಅದನ್ನು ಹಾಡಬೇಕು; ದೇಶಭಕ್ತಿಯನ್ನು ಸೂಚಿಸುವ ಅನೇಕ ಸಂಗತಿಗಳು ಆ ಹಾಡಿನಲ್ಲಿವೆ, ಹಾಗಾಗೇ ಶಿವಕುಮಾರ್ ಅದನ್ನು ಹಾಡಿದ್ದಾರೆ, ಅದರೆ ಕಾಂಗ್ರೆಸ್​ಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಚನ್ನಬಸಪ್ಪ ಹೇಳಿದರು.

ಶಿವಮೊಗ್ಗ, ಆಗಸ್ಟ್ 27: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಅಂತ ಸದನದಲ್ಲಿ ದೇಶಭಕ್ತಿ ಗೀತೆ ಹಾಡಿದ್ದಕ್ಕೆ ಕಾಂಗ್ರೆಸ್ ಅವರಿಂದ ಕ್ಷಮಾಪಣೆ ಕೇಳಿಸಿದ್ದು ಕಿವಿಗೆ ಬಿದ್ದಾಗ ನಗು ಬಂತು ಎಂದು ಶಿವಮೊಗ್ಗ ಬಿಜೆಪಿ ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷದ ಮಾನಸಿಕತೆಯೇ ಅಂಥದ್ದು, ಒಬ್ಬ ವಿದೇಶೀಯ ಎಓ ಹ್ಯೂಮ್ ಕಟ್ಟಿದ ಪಕ್ಷ ಅದು, ಅದರ ಸದಸ್ಯರಲ್ಲಿ ಇನ್ನು ದೇಶಭಕ್ತಿ ಹೇಗೆ ಹುಟ್ಟೀತು? ತಮ್ಮ ಪಕ್ಷದ ಸದಸ್ಯರು ದೇಶಭಕ್ತಿ ಗೀತೆ ಹಾಡುವುದನ್ನು ಕಾಂಗ್ರೆಸ್ ಸಹಿಸಿಕೊಳ್ಳುವುದಿಲ್ಲ, ದೇಶಭಕ್ತಿ ಇರೋರಿಗೆ ಕಡಿವಾಣ ಹಾಕುವ ದುಷ್ಟನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತದೆ ಎಂದು ಚನ್ನಬಸಪ್ಪ ಹೇಳಿದರು.

ಇದನ್ನೂ ಓದಿ: ‘ಭಾರತ್ ನಾಮ್ ಸಮ್ಮಾನ್’ ಮ್ಯೂಸಿಕ್‌ ಆಲ್ಬಂ: 22 ಭಾಷೆಗಳಲ್ಲಿ ದೇಶಭಕ್ತಿ ಗೀತೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ