ಆರೆಸ್ಸೆಸ್ ಗೀತೆ ವಿಷಯದಲ್ಲಿ ಶಿವಕುಮಾರ್ ಕ್ಷಮೆ ಕೇಳಿದ್ದಾರೆ, ಅದು ಮುಗಿದುಹೋದ ಅಧ್ಯಾಯ: ಹೆಚ್ಕೆ ಪಾಟೀಲ್
ಧರ್ಮಸ್ಥಳ ಶವಗಳನ್ನು ಹೂತಿಟ್ಟ ಪ್ರಕರಣದ ವಿಷಯದಲ್ಲಿ ಮಾತಾಡಿದ ಪಾಟೀಲ್, ಕಾಂಗ್ರೆಸ್ ನಾಯಕರೆಲ್ಲ ಮಂಜುನಾಥನ ಭಕ್ತರು, ಅಲ್ಲಿ ನಡೆದ ಬೆಳವಣಿಗೆಗಳಿಂದ ಎಲ್ಲ ಭಕ್ತರಿಗೆ ನೋವಾಗಿದೆ, ಅದರೆ ಸತ್ಯ ಹೊರಬಂದ ಕಾರಣ ಸಂತೋಷವೂ ಆಗಿದೆ, ವಿಷಯ ಅಲ್ಲಿಗೆ ಕೊನೆಗೊಳ್ಳಬೇಕು, ಆದರೆ ಇದರಲ್ಲಿ ರಾಜಕಾರಣ ಮಾಡಲು ಹೊರಟರೆ ಪಾಪಕ್ಕೆ ಗುರಿಯಾಗಬೇಕಾದೀತು ಎಂಬ ಎಚ್ಚರಿಕೆ ಕೊಡಬಯಸುತ್ತೇನೆ ಎಂದರು.
ದೆಹಲಿ, ಆಗಸ್ಟ್, 27: ಸಭೆಯೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಿರುವ ಕಾನೂನು ಸಚಿವ ಹೆಚ್ ಕೆ ಪಾಟೀಲ್ (HK Patil) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಾ, ಡಿಕೆ ಶಿವಕುಮಾರ್ (DK Shivakumar) ಸದನದಲ್ಲಿ ಆರೆಸ್ಸೆಸ್ ಪ್ರಾರ್ಥನಾ ಗೀತೆಯನ್ನು ಹಾಡಿ ವಿವಾದ ಸೃಷ್ಟಿಸಿದ್ದು, ನಂತರ ಅದರ ಬಗ್ಗೆ ವಿವರಣೆ ನೀಡಿ ಕ್ಷಮಾಪಣೆ ಕೇಳಿದ್ದು ಈಗ ಮುಗಿದ್ದು ಹೋದ ಅಧ್ಯಾಯ, ಪಕ್ಷದ ಅಧ್ಯಕ್ಷರೇ ಅದೊಂದು ಮುಗಿದ ಅಧ್ಯಾಯ ಅಂತ ಹೇಳಿದ್ದಾರೆ, ಹಾಗಾಗಿ ಅದರ ಬಗ್ಗೆ ಮಾತಾಡೋದು ಸರಿಯಲ್ಲ ಎಂದರು. ಶಿವಕುಮಾರ್ ಕ್ಷಮೆ ಯಾಚಿಸಿದ ಹಾಗೆ ರಾಜಣ್ಣ ಕೂಡ ಮಾಡಿದರೆ ಅವರನ್ನು ಸಂಪುಟಕ್ಕೆ ವಾಪಸ್ಸು ಸೇರಿಸಿಕೊಳ್ಳುತ್ತೀರಾ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಪಾಟೀಲ್, ಬಿಜೆಪಿಯೊಂದಿಗೆ ಕೈ ಜೋಡಿಸಿರುವ ಕೆಲ ಮಾಧ್ಯಮಗಳು ಅಂಥ ಚರ್ಚೆಗಳನ್ನು ಹುಟ್ಟುಹಾಕುತ್ತಿವೆ, ಎರಡು ವಿಷಯಗಳ ನಡುವೆ ಥಳುಕು ಹಾಕುವುದು, ಚರ್ಚೆ ಮಾಡೋದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: ಚಾಮುಂಡಿ ಬೆಟ್ಟ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎನ್ನುವ ಶಿವಕುಮಾರ್ ಕ್ಷಮೆ ಕೇಳಬೇಕು: ಶೋಭಾ ಕರಂದ್ಲಾಜೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

