ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ ಕಾಂಗ್ರೆಸ್ ಮುಖಂಡ, ವಿಡಿಯೋ ನೋಡಿ
ಏ ಕರಿ ಟೋಪಿ ಎಂಎಎಲ್ ಬಾರಪ್ಪ ಎಂದು ಡಿಕೆ ಶಿವಕುಮಾರ್ ಕರೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಮುನಿರತ್ನ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಸ್ಥಳದಲ್ಲೇ ಏಕಾಂಗಿಯಾಗಿ ಧರಣಿ ಕುಳಿತರು. ಬಳಿಕ ಪೊಲೀಸರು ಅವರನ್ನು ಕರೆದೊಯ್ದರು. ಈ ವೇಳೆ ಗದ್ದಲದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು, ಮುನಿರತ್ನ ಧರಿಸಿದ್ದ ಆರ್ ಎಸ್ಎಸ್ ಟೋಪಿಯನ್ನು ಕಿತ್ತೆಸೆದಿರುವ ಘಟನೆ ನಡೆದಿದೆ.
ಬೆಂಗಳೂರು, (ಆಕ್ಟೋಬರ್ 12): ಬೆಂಗಳೂರಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ವಿಶೇಷ ಪ್ರಯತ್ನದಲ್ಲಿದ್ದಾರೆ. ಅಂತೆಯೇ ಇವತ್ತು ಜೆಪಿ ಪಾರ್ಕ್ನಲ್ಲಿ ವಾಯು ವಿಹಾರ ನಡೆಸಿದರು. ಆಗ ಇದ್ದಕ್ಕಿದ್ದಂತೆ ದೊಡ್ಡ ಹೈಡ್ರಾಮಾ ನಡೆದಿದೆ. ಏ ಕರಿ ಟೋಪಿ ಎಂಎಎಲ್ ಬಾರಪ್ಪ ಎಂದು ಡಿಕೆ ಶಿವಕುಮಾರ್ ಕರೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಮುನಿರತ್ನ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಸ್ಥಳದಲ್ಲೇ ಏಕಾಂಗಿಯಾಗಿ ಧರಣಿ ಕುಳಿತರು. ಬಳಿಕ ಪೊಲೀಸರು ಅವರನ್ನು ಕರೆದೊಯ್ದರು. ಈ ವೇಳೆ ಗದ್ದಲದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು, ಮುನಿರತ್ನ ಧರಿಸಿದ್ದ ಆರ್ ಎಸ್ಎಸ್ ಟೋಪಿಯನ್ನು ಕಿತ್ತೆಸೆದಿರುವ ಘಟನೆ ನಡೆದಿದೆ.
Published on: Oct 12, 2025 07:03 PM

