ರಾಷ್ಟ್ರದ ಸಂವಿಧಾನಿಕ ಸಂಸ್ಥೆಗಳನ್ನು ಕಾಂಗ್ರೆಸ್ ನಾಯಕರು ಅಪಮಾನಿಸುತ್ತಿದ್ದಾರೆ: ಬಿವೈ ವಿಜಯೇಂದ್ರ

Updated on: Jul 25, 2025 | 2:29 PM

ರಾಹುಲ್ ಗಾಂಧಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಅವರು ಭಾರತದ ಚುನಾವಣಾ ಆಯೋಗವನ್ನು ಪ್ರಶ್ನಿಸುತ್ತಿದ್ದಾರೆ, ಅದರೆ ಬಿಜೆಪಿ ಯಾಕೆ ಆಯೋಗದ ಪರ ವಕಾಲತ್ತು ಮಾಡುತ್ತಿದೆ ಎಂದು ಪತ್ರಕರ್ತರೊಬ್ಬರು ಕನ್ನಡದಲ್ಲೇ ಕೇಳಿದಾಗ ವಿಜಯೇಂದ್ರ ತಾವು ಮೊದಲು ಕನ್ನಡದಲ್ಲಿ ಹೇಳಿದ್ದನ್ನೇ ಇಂಗ್ಲಿಷ್​ನಲ್ಲಿ ಹೇಳಲಾರಂಭಿಸುತ್ತಾರೆ! ಯಾಕೆ ಹೀಗೆ ಅನ್ನೋದು ಅಲ್ಲಿ ನೆರೆದಿದ್ದ ಪತ್ರಕರ್ತರಿಗೆ ಮತ್ತು ಕನ್ನಡಿಗರಿಗೆ ಅರ್ಥವಾಗಲಾರದೇ?

ಬೆಂಗಳೂರು, ಜುಲೈ: ದೇಶದ ಸಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ (Rahul Gandhi), ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವುಗಳನ್ನು ಅಪಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಸುಪ್ರೀಂ ಕೋರ್ಟ್ ನಲ್ಲಿ ಈ ಬಗ್ಗೆ ವಿಚಾರನೆ ನಡೆಯುತ್ತಿದೆ, ಒಂದು ಪಕ್ಷ ಚುನಾವಣೆಯಲ್ಲಿ ಮತಗಳ್ಳತನ, ಅಕ್ರಮ ನಡೆದಿದ್ದರೆ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತಿತ್ತೇ, ಉಪ ಚುನಾವಣೆಯಲ್ಲಿ ಅವರಿಗೆ ಎಲ್ಲ 3 ಸೀಟು ಗೆಲ್ಲಲು ಸಾಧ್ಯವಾಗುತಿತ್ತೇ? ಸಿದ್ದರಾಮಯ್ಯ ಸಿಎಂ ಮತ್ತು ಶಿವಕುಮಾರ್ ಡಿಸಿಎಂ ಅಗುತ್ತಿದ್ದರೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಿಜೆಪಿ ಬಣ ರಾಜಕೀಯ: ದೆಹಲಿಯಲ್ಲಿ ತಂತ್ರ-ಪ್ರತಿತಂತ್ರ! ವಿಜಯೇಂದ್ರ ವಿರುದ್ಧ ಮತ್ತೆ ದೂರು ನೀಡಲಿದೆ ಭಿನ್ನರ ಬಣ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ