ಏನಿಲ್ಲಾ ಏನಿಲ್ಲಾ! ಕಾರ್ಯಕರ್ತರ ಸಭೆಯಲ್ಲಿ ವಿಜಯಾನಂದ ಕಾಶಪ್ಪನವರ ಹಾಡು: ವಿಡಿಯೋ ನೋಡಿ

| Updated By: Ganapathi Sharma

Updated on: Apr 11, 2024 | 12:56 PM

ನಾನು ಹುಟ್ಟಿದ್ದು ಕಾಂಗ್ರೆಸ್​​ನಲ್ಲಿ. ಸಾಯೋದು ಸಹ ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ. ನಮಗಿಂತ ಪಕ್ಷವೇ ದೊಡ್ಡದು ಎಂದು ನಂಬಿರುವ ಕುಟುಂಬ ನಮ್ಮದು ಎಂದ ಶಾಸಕ ವಿಜಯಾನಂದ ಕಾಶಪ್ಪನವರ, ‘ಏನಿಲ್ಲಾ ಏನಿಲ್ಲಾ’ ಹಾಡು ಹಾಡುವ ಮೂಲಕ ಮಾರ್ಮಿಕವಾಗಿ ಮಾತನಾಡಿದರು. ಶಾಸಕರು ಹಾಡಿರುವ ವಿಡಿಯೋ ಇಲ್ಲಿದೆ ನೋಡಿ.

ಬಾಗಲಕೋಟೆ, ಏಪ್ರಿಲ್ 11: ಇಳಕಲ್ ನಗರದ ತಮ್ಮ ನಿವಾಸದಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ (Vijayananda Kashappanavar) ‘ಏನಿಲ್ಲಾ ಏನಿಲ್ಲಾ’ ಹಾಡು ಹಾಡುವ ಮೂಲಕ ಮಾರ್ಮಿಕವಾಗಿ ಮಾತನಾಡಿದರು. ‘ಏನಿಲ್ಲಾ ಏನಿಲ್ಲಾ, ನಿನ್ನ ನನ್ನ ನಡುವೆ ಏನಿಲ್ಲ. ನಿಜದಂತಿರುವ ಸುಳ್ಳುಗಳೆಲ್ಲ ನಿಜವಲ್ಲ’ ಎಂದು ಚುನಾವಣೆ ಪ್ರಚಾರ ಸಭೆಯಲ್ಲಿ ಮಾರ್ಮಿಕವಾಗಿ ಹಾಡು ಹಾಡಿ ಕಾಶಪ್ಪನವರ ಉದಾಹರಣೆ ನೀಡಿದರು.

ಲೋಕಸಭೆ ಚುನಾವಣೆಗೆ ಪತ್ನಿಗೆ ಟಿಕೆಟ್ ತಪ್ಪಿದ್ದಕ್ಕೆ ಬೇಸರ ಆಗಿತ್ತು. ಅದು ಬಿಟ್ಟರೆ ಕಾಂಗ್ರೆಸ್ ಜತೆ ವೈಮನಸ್ಸಿಲ್ಲ. ಕಾಂಗ್ರೆಸ್ ಪಕ್ಷ ಅಂದರೆ ಕಾಶಪ್ಪನವರ ಕುಟುಂಬ, ಕಾಶಪ್ಪನವರ ಕುಟುಂಬ ಅಂದ್ರೆ ಕಾಂಗ್ರೆಸ್. ಇಡೀ ಜಿಲ್ಲೆಯಲ್ಲಿ ಈಗ ಬಹಳಷ್ಟು ಜನರ ಕಾತುರದಿಂದ ಇದ್ದೀರಿ. ಏನು ಆಗುತ್ತದೆ ಎಂಬ ಆತಂಕದಲ್ಲಿದ್ದಿರಿ. ಹಾಗೆಲ್ಲ ಏನೂ ಆಗಲ್ಲ ಎಂದು ಅವರು ಭರವಸೆ ನೀಡಿದರು.

ನಾನು ಹುಟ್ಟಿದ್ದು ಕಾಂಗ್ರೆಸ್​​ನಲ್ಲಿ. ಸಾಯೋದು ಸಹ ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ. ಈಗ ಇಡೀ ಕ್ಷೇತ್ರದ ಜನರ ಕಣ್ಣು ನನ್ನ ಮೇಲೆ ಇದೆ. ಕಾರಣ ನನ್ನ ಹೆಂಡತಿಗೆ ಟಿಕೆಟ್ ಕೇಳಿದ್ದೆ, ಕೊಡಲಿಲ್ಲ. ನಮಗಿಂತ ಪಕ್ಷವೇ ದೊಡ್ಡದು ಎಂದು ನಂಬಿರುವ ಕುಟುಂಬ ನಮ್ಮದು. ನನಗೆ ಸಿಟ್ಟು ಬರುತ್ತೆ, ಆದರೆ, ಮನಸ್ಸು ಹಾಗಿಲ್ಲ. ಯಾರಾದ್ರೂ ಬಂದು ವಿರೋಧ ಮಾಡು (ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಿರುದ್ದ ಕೆಲಸ) ಅಂದ್ರೂ ನಾನು ವಿರೋಧ ಮಾಡಲ್ಲ. ಇದು ನನ್ನ ತಾಯಿ ಸಾಕ್ಷಿಯಾಗಿ ಹೇಳುವ ಮಾತು ಎಂದು ಕಾಶಪ್ಪನವರ ಹೇಳಿದರು.

ಇದನ್ನೂ ಓದಿ: ಮೋದಿಗೇ ಧೈರ್ಯವಿಲ್ಲ, ಬಿಎಸ್​ವೈ ನಿರ್ಮಲಾಗೆ ಉತ್ತರಿಸಲಿ ಎಂದ ಡಿಕೆ: ಬಿಎಸ್​ವೈ ವಿರುದ್ಧ ಡಿಸಿಎಂ ಕೋಪಕ್ಕೆ ಕಾರಣವೇನು?

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಪ್ರಚಾರ ನಡೆಸುವುದಾಗಿ ಹೇಳಿದ ಕಾಶಪ್ಪನವರ, ಪತ್ನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಪಕ್ಷದ ವಿರುದ್ಧ ಕೆಲಸ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 11, 2024 12:54 PM