ಮೈಸೂರು ಜನಾಂದೋಲನದಲ್ಲಿ ಮರುಕಳಿಸಿದ ಸಿದ್ದರಾಮೋತ್ಸವದ ಪ್ರಸಂಗ, ವಿಡಿಯೋ ಇಲ್ಲಿದೆ ನೋಡಿ
ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯನವರ ಹೆಸರು ಹೇಳುತ್ತಿದ್ದಂತೆಯೇ ಹೇಗೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತೋ ಅದೇ ರೀತಿ ಮೈಸೂರು ಜನಾಂದೋಲದಲ್ಲೂ ಮರುಕಳಿಸಿದೆ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಹೆಸರು ಹೇಳುತ್ತಿದ್ದಂತೆಯೇ ಜನರು ಕೂಗಾಟ, ಚೀರಾಟ ಮುಗಿಲು ಮುಟ್ಟಿದೆ.
ಮೈಸೂರು, (ಆಗಸ್ಟ್ 09): ಜೆಡಿಎಸ್ ಮತ್ತು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈಸೂರಿಗೆ ಪಾದಯಾತ್ರೆ ನಡೆಸಿದ್ದರೆ, ಮತ್ತೊಂದೆಡೆ ದೋಸ್ತಿಗಳ ವಿರುದ್ಧ ಕಾಂಗ್ರೆಸ್ ಜನಾಂದೋಲ ಕಾರ್ಯಕ್ರಮ ನಡೆಸಿದೆ. ಇಂದು(ಆಗಸ್ಟ್ 09) ಮೈಸೂರಿನಲ್ಲಿ ನಡೆದ ಜನಾಂದೋಲ ಕಾರ್ಯಕ್ರದಲ್ಲಿ ಸಿದ್ದರಾಮೋತ್ಸವದ ಪ್ರಸಂಗ ಮರುಕಳಿಸಿದೆ. ಹೌದು..ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯನವರ ಹೆಸರು ಹೇಳುತ್ತಿದ್ದಂತೆಯೇ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಅದರಂತೆ ಇದೀಗ ಮೈಸೂರು ಜನಾಂದೋನಲ ಕಾರ್ಯಕ್ರಮದಲ್ಲೂ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಹೆಸರು ಹೇಳುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ನೆರೆದಿದ್ದವರ ಶಿಳ್ಳೆ, ಕೇಕೆ ಮುಗಿಲು ಮುಟ್ಟಿದೆ. ಆ ಒಂದು ಪ್ರಸಂಗ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ