AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಕುಟುಂಬ ವಿಶೇಷವಾಗಿ ಪತ್ನಿ ವಿಜಯಲಕ್ಷ್ಮಿ ಜೊತೆ ನಿರಂತರ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್

ದರ್ಶನ್ ಕುಟುಂಬ ವಿಶೇಷವಾಗಿ ಪತ್ನಿ ವಿಜಯಲಕ್ಷ್ಮಿ ಜೊತೆ ನಿರಂತರ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 04, 2024 | 6:56 PM

Share

ಲೋಕಸಭಾ ಚುನವಣೆಗೆ ಮೊದಲು ಸುಮಲತಾ ಅಂಬರೀಶ್ ಬಿಜೆಪಿ ಸೇರಿದ್ದು ಪ್ರಾಯಶಃ ದರ್ಶನ್ ಗೆ ಇಷ್ಟವಾಗಿರಲಿಲ್ಲ. ಅವರು ಬಿಜೆಪಿ ಸೇರಿದಾಗ್ಯೂ ಲೋಕಸಭಾ ಚುನಾವಣೆಯಲ್ಲಿ ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರ ಪರ ಪ್ರಚಾರ ಮಾಡಿದ್ದರು. ಸುಮಲತಾ ಯಾರ ಪರವೂ ಪ್ರಚಾರಕ್ಕಿಳಿದಿರಲಿಲ್ಲ.

ಬೆಂಗಳೂರು: ಚಿತ್ರನಟ ದರ್ಶನ್ ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಒಬ್ಬ ತಾಯಿಯ ಹಾಗೆ. ಸುಮಲತಾ ಜೊತೆ ಇರುವಾಗ ದರ್ಶನ್, ಸುಮಮ್ಮ ಸುಮಮ್ಮ ಅನ್ನುತ್ತ ಚಿಕ್ಕ ಮಗುವಿನಂತೆ ಹಿಂದೆ ಸುತ್ತುತ್ತಿರುತ್ತಾರೆ. ಸುಮಲತಾ, ತಮ್ಮ ಮಾನಸ ಪುತ್ರ ಜೈಲು ಸೇರಿದರೂ ಯಾವುದೇ ಪ್ರತಿಕ್ರಿಯೆ ನೀಡದೆ ಹೋಗಿದ್ದು ಸಹಜವಾಗೇ ಅಚ್ಚರಿ ಹುಟ್ಟಿಸಿತ್ತು, ಇವತ್ತು ಬೆಂಗಳೂರಲ್ಲಿ ಮೌನ ಮುರಿದ ಸುಮಲತಾ, ಕಾನೂನು ವ್ಯವಸ್ಥೆ ತನ್ನದೇ ಆದ ಪ್ರಕ್ರಿಯೆ ಹೊಂದಿರುತ್ತದೆ ಮತ್ತು ಅದು ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತದೆ. ಅದರ ಬಗ್ಗೆ ಕಾಮೆಂಟ್ ಮಾಡುವುದು ಸರಿಯಲ್ಲ. ಈಗ ತಾನು ಏನೇ ಹೇಳಿದರೂ ಆದು ವೈಯಕ್ತಿಕವಾದದ್ದು, ಪಕ್ಷದ ವಿಚಾರ ಉದ್ಭವಿಸಲ್ಲ, ಸದ್ಯದ ಪರಿಸ್ಥಿಯಲ್ಲಿ ದರ್ಶನ್ ತಾಯಿ, ತಮ್ಮ ಮತ್ತು ಪತ್ನಿ ವಿಜಯಲಕ್ಷ್ಮಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ, ಅದರೆ ತಾವು ಕುಟುಂಬದ ಎಲ್ಲ ಸದಸ್ಯರೊಂದಿಗೆ ಅದರಲ್ಲ್ಲೂ ವಿಶೇಷವಾಗಿ ವಿಜಯಲಕ್ಷ್ಮಿಯೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದೇನೆ ಎಂದು ಸುಮಲತಾ ಹೇಳಿದರು. ತಮ್ಮ ಮೌನವನ್ನು ಬೇರೆ ರೀತಿ ಬಿಂಬಿಸುವ ಪ್ರಯತ್ನಗಳು ನಡೆದಿವೆ, ಇದು ಸಾರ್ವಜನಿಕವಾಗಿ ಹೇಳಿಕೆ ನೀಡುವ ವಿಷಯವಲ್ಲ, ಅಭಿಮಾನಿಗಳಲ್ಲೂ ಗೊಂದಲವಿದೆ, ಈ ಹಿನ್ನೆಲೆಯಲ್ಲಿ ಸ್ಪಷ್ಟತೆ ನೀಡೋಣ ಅಂತ ಇವತ್ತು ಮಾಧ್ಯಮಗಳ ಜತೆ ಮಾತಾಡಿದ್ದೇನೆ ಎಂದು ಸುಮಲತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿಹಿ ಸುದ್ದಿ ಕೊಡಲಿದ್ದಾರಾ ಮಗ-ಸೊಸೆ: ಸುಮಲತಾ ಅಂಬರೀಶ್ ಹೇಳಿದ್ದು ಹೀಗೆ