ಬೆಳಗ್ಗೆ ನೀಡಿದ ಕಾಮೆಂಟ್ಗೆ ವ್ಯತಿರಿಕ್ತವಾಗಿ ಕುಮಾರಸ್ವಾಮಿಯವರು ಸಿಎಂ ಸಿದ್ದರಾಮಯ್ಯ ಕರೆದ ಸಭೆಗೆ ಹಾಜರಾದರು!
ರಾಜ್ಯದಿಂದ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಸಂಸದರು, ರಾಜ್ಯಸಭಾ ಸದಸ್ಯರೊಡನೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು. ಅವರೊಂದಿಗೆ ಉಪ ಮುಖ್ಯಮಂತ್ರಿಯಲ್ಲದೆ, ಅವರ ಸಚಿವ ಸಂಪುಟದ ಹಲವಾರು ಸಚಿವರು ಮತ್ತು ಅಧಿಕಾರ ವರ್ಗ ಇರೋದನ್ನು ದೃಶ್ಯಗಳಲ್ಲಿ ನೋಡಬಹುದು.
ದೆಹಲಿ: ಒಂದು ಕ್ಷಣಕ್ಕಾಗಿ ಕನ್ನಡಿಗರು ಕಾತರಿಸಿದ್ದು ಸುಳ್ಳಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಪರಸ್ಪರ ಎದುರಾದಾಗ ಅವರ ಪ್ರತಿಕ್ರಿಯೆಗಳು ಹೇಗಿರುತ್ತವೆ ಅಂತ ನೋಡಲು ಎಲ್ಲರು ಕುತೂಹಲದಿಂದ ಎದುರು ನೋಡುತ್ತಿದ್ದರು. ಅಸಲಿಗೆ ಬೆಳಗ್ಗೆ ಕುಮಾರಸ್ವಾಮಿಯವರು ನೀಡಿದ ಪ್ರತಿಕ್ರಿಯೆಯು ಅವರು ಸಿದ್ದರಾಮಯ್ಯ ಕರೆದಿರುವ ಸಭೆಯಲ್ಲಿ ಭಾಗಿಯಾಗುತ್ತಾರೋ ಇಲ್ಲವೋ ಅಂತ ಅನುಮಾನ ಮೂಡಿತ್ತು. ಆದರೆ ಬೃಹತ್ ಕೈಗಾರಿಕೆಗಳ ಸಚಿವ ಕುಮಾರಸ್ವಾಮಿ ಸಭೆ ಆಯೋಜನೆಗೊಂಡಿರುವ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಅಗಮಿಸಿ ರಾಜಕೀಯ ಬೇರೆ ರಾಜ್ಯದ ಹಿತಾಸಕ್ತಿ ಬೇರೆ ಅನ್ನೋದನ್ನು ಪ್ರೂವ್ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕುಮಾರಸ್ವಾಮಿಯವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡು ಅವರ ಭುಜ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಆದರೆ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅಕ್ಕಪಕ್ಕ ಕುಳಿತಿದ್ದರೂ ಅವರ ನಡುವೆ ಮಾತಿಕತೆ ನಡೆಯಲಿಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಪರಸ್ಪರ ಎದುರಾದ ಸಂದರ್ಭ ಹೇಗಿತ್ತು ಗೊತ್ತಾ?