ಕೊವಿಡ್ ಸೆಂಟರ್​ನಿಂದ ಸೋಂಕಿತ ಎಸ್ಕೇಪ್​.. ಹಿಡಿಯಲು ಹೋದ ಮಾರ್ಷಲ್​ಗಳಿಗೆ accident

[lazy-load-videos-and-sticky-control id=”IJ6HTS6ljws”] ಬೆಂಗಳೂರು: BIEC ಕೊವಿಡ್ ಸೆಂಟರ್​ನಿಂದ ಪರಾರಿಯಾದ ಸೋಂಕಿತನನ್ನ BBMP ಮಾರ್ಷಲ್​ಗಳು ಹಿಡಿಯಲು ಹೋದ ವೇಳೆ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಮಾದಾವರ ಬಳಿ ಇರುವ BIEC ಕೋವಿಡ್​ ಸೆಂಟರ್​ನಿಂದ ಸೋಂಕಿತನೊಬ್ಬ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ವೇಳೆ ಅಲ್ಲೇ ಭದ್ರತೆಗೆಂದು ನಿಯೋಜನೆಗೊಂಡಿದ್ದ ಬಿಬಿಎಂಪಿ ಮಾರ್ಷಲ್​ಗಳು ಮತ್ತೊಂದು ಕಾರಿನಲ್ಲಿ ಆತನನ್ನು ಹಿಡಿಯಲು ಹಿಂಬಾಲಿಸಿದ್ದಾರೆ. ಈ ವೇಳೆ ಮಾರ್ಷಲ್​ಗಳಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ […]

ಕೊವಿಡ್ ಸೆಂಟರ್​ನಿಂದ ಸೋಂಕಿತ ಎಸ್ಕೇಪ್​.. ಹಿಡಿಯಲು ಹೋದ ಮಾರ್ಷಲ್​ಗಳಿಗೆ accident
Follow us
ಸಾಧು ಶ್ರೀನಾಥ್​
|

Updated on:Aug 17, 2020 | 10:36 AM

[lazy-load-videos-and-sticky-control id=”IJ6HTS6ljws”]

ಬೆಂಗಳೂರು: BIEC ಕೊವಿಡ್ ಸೆಂಟರ್​ನಿಂದ ಪರಾರಿಯಾದ ಸೋಂಕಿತನನ್ನ BBMP ಮಾರ್ಷಲ್​ಗಳು ಹಿಡಿಯಲು ಹೋದ ವೇಳೆ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ.

ಮಾದಾವರ ಬಳಿ ಇರುವ BIEC ಕೋವಿಡ್​ ಸೆಂಟರ್​ನಿಂದ ಸೋಂಕಿತನೊಬ್ಬ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ವೇಳೆ ಅಲ್ಲೇ ಭದ್ರತೆಗೆಂದು ನಿಯೋಜನೆಗೊಂಡಿದ್ದ ಬಿಬಿಎಂಪಿ ಮಾರ್ಷಲ್​ಗಳು ಮತ್ತೊಂದು ಕಾರಿನಲ್ಲಿ ಆತನನ್ನು ಹಿಡಿಯಲು ಹಿಂಬಾಲಿಸಿದ್ದಾರೆ.

ಈ ವೇಳೆ ಮಾರ್ಷಲ್​ಗಳಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರು ಮಾರ್ಷಲ್​ಗಳ ಪೈಕಿ ಒಬ್ಬರಿಗೆ ಗಾಯಗಳಾಗಿದೆ. ಉಳಿದವರು ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಾರಿಯಾಗಿರುವ ಸೋಂಕಿತನನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

Published On - 4:56 pm, Sun, 16 August 20