ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ! 47 ಎಕರೆ ಭೂಮಿ ವಸತಿ ವಲಯಕ್ಕೆ ಬದಲಿಸಲು ಹುನ್ನಾರ?

Edited By:

Updated on: Feb 13, 2026 | 12:45 PM

ಮುಡಾ ಈಗ ಎಂಡಿಎ ಆಗಿ ಹೆಸರು ಬದಲಾದರೂ ಅಕ್ರಮಗಳು ನಿಲ್ಲಲಿಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಆರೋಪಿಸಿದ್ದಾರೆ. 2025ರ ಆಗಸ್ಟ್ 8ರಂದು ನಡೆದ ಎಂಡಿಎ ಮೊದಲ ಸಭೆಯಲ್ಲೇ 4.27 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ 47 ಎಕರೆ ಕೃಷಿ ವಲಯದ ಭೂಮಿಯನ್ನು ವಸತಿ ವಲಯಕ್ಕೆ ಬದಲಿಸಲು ಹುನ್ನಾರ ನಡೆದಿದೆ ಎಂದು ದೂರಿದ್ದಾರೆ. ಮುಡಾ ಪ್ರಭಾರ ಆಯುಕ್ತ ರಕ್ಷಿತ್, ಪರಿಷತ್ ಸದಸ್ಯ ಮಧು ಮಾದೇಗೌಡ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸಂಬಂಧಿಕರಿಗೆ ಅನುಕೂಲವಾಗಲು ಕಾನೂನು ಉಲ್ಲಂಘನೆ ನಡೆದಿದೆ ಎಂದು ಹೇಳಿ, ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ

ಮೈಸೂರು, ಫೆಬ್ರವರಿ 13: ಮುಡಾ ಈಗ ಎಂಡಿಎ (MDA)ಆಗಿ ಹೆಸರು ಬದಲಾದರೂ ಅಕ್ರಮಗಳು ನಿಲ್ಲಲಿಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಆರೋಪಿಸಿದ್ದಾರೆ. 2025ರ ಆಗಸ್ಟ್ 8ರಂದು ನಡೆದ ಎಂಡಿಎ ಮೊದಲ ಸಭೆಯಲ್ಲೇ 4.27 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ 47 ಎಕರೆ ಕೃಷಿ ವಲಯದ ಭೂಮಿಯನ್ನು ವಸತಿ ವಲಯಕ್ಕೆ ಬದಲಿಸಲು ಹುನ್ನಾರ ನಡೆದಿದೆ ಎಂದು ದೂರಿದ್ದಾರೆ. ಮುಡಾ ಪ್ರಭಾರ ಆಯುಕ್ತ ರಕ್ಷಿತ್, ಪರಿಷತ್ ಸದಸ್ಯ ಮಧು ಮಾದೇಗೌಡ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸಂಬಂಧಿಕರಿಗೆ ಅನುಕೂಲವಾಗಲು ಕಾನೂನು ಉಲ್ಲಂಘನೆ ನಡೆದಿದೆ ಎಂದು ಹೇಳಿ, ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More