NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು ಅಂದಿದ್ದಕ್ಕೆ ಸಿಟಿ ರವಿ ಏನಂದ್ರು ನೋಡಿ

Edited By:

Updated on: Jul 26, 2026 | 10:48 PM

ಸಿ.ಟಿ. ರವಿ ತಮ್ಮ "ಮುಲ್ಲಾ" ಹೇಳಿಕೆಯನ್ನು ಸಮರ್ಥಿಸಿಕೊಂಡು, ಯಾವುದೇ ಭಯವಿಲ್ಲದೆ ಅದನ್ನು ಪುನರುಚ್ಚರಿಸುವುದಾಗಿ ಹೇಳಿದರು. ದೆಹಲಿಯ ನೀಟ್ ಪ್ರತಿಭಟನೆ ವೇಳೆ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಿದ ಮುಲ್ಲಾನನ್ನು ಉದ್ದೇಶಿಸಿ ಮಾತನಾಡಿರುವುದಾಗಿ ಸ್ಪಷ್ಟಪಡಿಸಿದರು. ಇದರ ಜೊತೆಗೆ, ನೀಟ್ ಪರೀಕ್ಷಾ ಸೋರಿಕೆ ತನಿಖೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರ ಶೀಘ್ರ ಕ್ರಮವನ್ನು ಶ್ಲಾಘಿಸಿದ ಸಿ.ಟಿ. ರವಿ, ಕೆಪಿಎಸ್‌ಸಿ ಭ್ರಷ್ಟಾಚಾರದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ತನಿಖೆಗೆ ಆಗ್ರಹಿಸಿದರು.

ದಾವಣಗೆರೆ, ಜುಲೈ 26: ‘ಮುಲ್ಲಾ ಹೇಳಿಕೆಯನ್ನು ಯಾವುದೇ ಭಯವಿಲ್ಲದೆ, ನೂರಕ್ಕೆ ಸಾವಿರ ಸಾರಿ ಕೋರ್ಟ್ ಮುಂದೆ ಸಹ ಹೇಳುತ್ತೇನೆ. ಜೀವನದಲ್ಲಿ ಹಿಂದಿಟ್ಟ ಹೆಜ್ಜೆ ಇಲ್ಲ’ ಎಂದು ಬಿಜೆಪಿ ಪರಿಷತ್​ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಈ ಹೇಳಿಕೆಯು ಒಬ್ಬ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಹೇಳಿರುವುದು. ದೆಹಲಿಯಲ್ಲಿ ನೀಟ್ ಚಳುವಳಿಯ ಸಂದರ್ಭದಲ್ಲಿ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಿದ ಮುಲ್ಲಾನನ್ನು ಉದ್ದೇಶಿಸಿ ನಾನು ಮಾತನಾಡಿದ್ದು, ಅವನನ್ನು ಸಮರ್ಥಿಸುವವರೆಲ್ಲರೂ ಪಾಪಿಗಳು ಮತ್ತು ಅಧರ್ಮಿಗಳು’ ಎಂದು ಅವರು ಆರೋಪಿಸಿದರು. ‘ನೀಟ್ ಪರೀಕ್ಷೆಗೆ ಸಂಬಂಧಿಸಿದ ಚಳುವಳಿಯಲ್ಲೇ ಈ ಘಟನೆ ನಡೆದಿರುವ ಮಾಹಿತಿ ಇದೆ. ಇದಲ್ಲದೆ, ಸೈನಿಕರು ಮತ್ತು ಪ್ರಧಾನಮಂತ್ರಿಗಳಿಗೆ ಅವಮಾನ ಮಾಡಿದ ಬಗ್ಗೆಯೂ ವಿಡಿಯೋ ಸಾಕ್ಷ್ಯಗಳಿವೆ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More