ತೆಲಂಗಾಣದಲ್ಲಿ ಲಾರಿಯಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಕೇಂದ್ರ ಸಚಿವ ಬಂಡಿ ಸಂಜಯ್

ತೆಲಂಗಾಣದಲ್ಲಿ ಲಾರಿಯಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಕೇಂದ್ರ ಸಚಿವ ಬಂಡಿ ಸಂಜಯ್

ಸುಷ್ಮಾ ಚಕ್ರೆ
|

Updated on: Nov 11, 2024 | 2:59 PM

ಕೇಂದ್ರ ಸಚಿವ ಸಂಜಯ್ ಕುಮಾರ್ ಹುಜೂರಾಬಾದ್ ಪ್ರವಾಸದಲ್ಲಿದ್ದಾಗ ರಸ್ತೆಯೊಂದರಲ್ಲಿ ಟ್ರಕ್‌ನಡಿ ಸಿಲುಕಿಕೊಂಡಿದ್ದ ಮಹಿಳೆಯಾದ ದಿವ್ಯಶ್ರೀಯನ್ನು ಬಚಾವ್ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ, ಮಹಿಳೆಯು ಟ್ರಕ್‌ನ ಕೆಳಗೆ ಸಿಲುಕಿಕೊಂಡಿರುವುದನ್ನು ಕಾಣಬಹುದು. ಆಕೆಯ ಕೂದಲಿನ ಒಂದು ಭಾಗವು ಟ್ರಕ್‌ನ ಒಂದು ಟೈರ್‌ನ ಅಡಿಯಲ್ಲಿ ಸಿಲುಕಿಕೊಂಡಿತ್ತು. ಆ ಕೂದಲನ್ನು ಕತ್ತರಿಸಿ ಆಕೆಯನ್ನು ರಕ್ಷಿಸಿ, ಹೊರಗೆ ತರಲಾಗಿದೆ.

ತೆಲಂಗಾಣ: ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಇಂದು ತೆಲಂಗಾಣದ ಕರೀಂನಗರ ಜಿಲ್ಲೆಯ ಮನಕೊಂಡೂರ್ ಗ್ರಾಮದಲ್ಲಿ ಲಾರಿಯಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಸಂಜಯ್ ಕುಮಾರ್ ಅವರು ಟೈರ್ ಅಡಿಯಲ್ಲಿ ಸಿಲುಕಿರುವ ಮಹಿಳೆಯ ಕೂದಲನ್ನು ಕತ್ತರಿಸಲು ಸ್ಥಳೀಯರಿಗೆ ಸೂಚಿಸಿದರು. ಬಳಿಕ ಆಕೆಯನ್ನು ಕರೀಂನಗರದ ಲೈಫ್​ಲೈನ್ ​​ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಕೇಂದ್ರ ಸಚಿವರ ಸೂಚನೆ ಮೇರೆಗೆ ತಲೆಗೂದಲು ಕತ್ತರಿಸಿ ಮಹಿಳೆಯ ಪ್ರಾಣ ಉಳಿಸಿದ ಸ್ಥಳೀಯರು ಕೂಡಲೇ ಕರೀಂನಗರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ದಿವ್ಯಶ್ರೀ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಆಸ್ಪತ್ರೆ ವೈದ್ಯರಿಗೆ ಸಂಜಯ್ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ