ನಾವು ಕನ್ನಡದ ಗ್ಯಾಂಗ್​ಸ್ಟರ್ಸ್​ ಎಂದ ಡಾಲಿ ಧನಂಜಯ್

| Updated By: ರಾಜೇಶ್ ದುಗ್ಗುಮನೆ

Updated on: Apr 07, 2022 | 3:35 PM

‘ನೀನೆ ಬೇಕು..’ ಹಾಡು ‘ಸಿಂಹ ಆಡಿಯೋ’ ಮೂಲಕ ಇತ್ತೀಚೆಗೆ ರಿಲೀಸ್ ಆಗಿದೆ. ಈ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್​ ಅವರು ಆಗಮಿಸಿದ್ದರು. ಅವರು ವಸಿಷ್ಠ ಸಿಂಹ ಜತೆಗಿನ ಫ್ರೆಂಡ್​ಶಿಪ್​ ಬಗ್ಗೆ ಮಾತನಾಡುವಾಗ ನಾವು ಕನ್ನಡದ ಗ್ಯಾಂಗ್​​ಸ್ಟರ್ಸ್​ ಎಂದು ಹೇಳಿದ್ದಾರೆ.

‘ಕಾಲಚಕ್ರ’ ಸಿನಿಮಾ (Kalachakra Movie) ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿವಿಧ ಗೆಟಪ್​ನಲ್ಲಿ ವಸಿಷ್ಠ ಸಿಂಹ (Vasishta Simha) ಕಾಣಿಸಿಕೊಂಡಿದ್ದಾರೆ. ಸುಮಂತ್​ ಕ್ರಾಂತಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಶ್ಮಿ ಕೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಕ್ಷಾ, ಸುಚೇಂದ್ರ ಪ್ರಸಾದ್, ದೀಪಕ್​ ಶೆಟ್ಟಿ ಮೊದಲಾದವರು ನಟಿಸಿರುವ ಈ ಸಿನಿಮಾ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ. ಈ ಚಿತ್ರದ ‘ನೀನೆ ಬೇಕು..’ ಹಾಡು ‘ಸಿಂಹ ಆಡಿಯೋ’ ಮೂಲಕ ಇತ್ತೀಚೆಗೆ ರಿಲೀಸ್ ಆಗಿದೆ. ಈ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್​ (Daali Dhananjay) ಅವರು ಆಗಮಿಸಿದ್ದರು. ಅವರು ವಸಿಷ್ಠ ಸಿಂಹ ಜತೆಗಿನ ಫ್ರೆಂಡ್​ಶಿಪ್​ ಬಗ್ಗೆ ಮಾತನಾಡುವಾಗ ನಾವು ಕನ್ನಡದ ಗ್ಯಾಂಗ್​​ಸ್ಟರ್ಸ್​ ಎಂದು ಹೇಳಿದ್ದಾರೆ. ಹಾಗಾದರೆ, ಧನಂಜಯ್​ ಅವರು ಈ ರೀತಿ ಹೇಳೋಕೆ ಕಾರಣವೇನು? ಆ ಪ್ರಶ್ನೆಗೆ ಈ ವಿಡಿಯೋದಲ್ಲಿದೆ ಉತ್ತರ.

ಇದನ್ನೂ ಓದಿ: ‘ಹೆಡ್ ​ಬುಷ್​’ ಚಿತ್ರದಲ್ಲಿ ವಸಿಷ್ಠ ಸಿಂಹ ಪಾತ್ರ ಏನು? ಗುಟ್ಟು ಬಿಟ್ಟುಕೊಟ್ಟ ಧನಂಜಯ 

‘ಹೆಡ್ ​ಬುಷ್​’ ಚಿತ್ರದಲ್ಲಿ ವಸಿಷ್ಠ ಸಿಂಹ ಪಾತ್ರ ಏನು? ಗುಟ್ಟು ಬಿಟ್ಟುಕೊಟ್ಟ ಧನಂಜಯ