Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದ ಥೀಮ್​ನಲ್ಲಿ ಡಾಲಿ ಧನಂಜಯ ಮದುವೆ ಮಂಟಪ; ಹೇಗಿದೆ ನೋಡಿ ವೈಭವ

ದೇವಸ್ಥಾನದ ಥೀಮ್​ನಲ್ಲಿ ಡಾಲಿ ಧನಂಜಯ ಮದುವೆ ಮಂಟಪ; ಹೇಗಿದೆ ನೋಡಿ ವೈಭವ

ಮದನ್​ ಕುಮಾರ್​
|

Updated on: Feb 16, 2025 | 8:06 AM

ಡಾಲಿ ಧನಂಜಯ ಅವರ ಮದುವೆ ಸಖತ್ ಗ್ರ್ಯಾಂಡ್ ಆಗಿ ಇಂದು (ಫೆಬ್ರವರಿ 16) ಮೈಸೂರಿನಲ್ಲಿ ನೆರವೇರುತ್ತಿದೆ. ದೇವಸ್ಥಾನದ ಥೀಮ್​ನಲ್ಲಿ ಮದುವೆ ಮಂಟಪ ಸಿದ್ಧವಾಗಿದೆ. ಎಲ್ಲ ಕಡೆಗಳಲ್ಲೂ ಅದ್ದೂರಿತನ ಕಾಣಿಸುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು, ಅಭಿಮಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಈ ಮದುವೆಗೆ ಹಾಜರಿ ಹಾಕುತ್ತಿದ್ದಾರೆ.

ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಧನಂಜಯ ಅವರ ಮದುವೆ ನಡೆಯುತ್ತಿದೆ. ಡಾಕ್ಟರ್ ಧನ್ಯತಾ ಜೊತೆ ಧನಂಜಯ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತುಂಬ ಅದ್ದೂರಿಯಾಗಿ ಮದುವೆಯ ಸೆಟ್ ಹಾಕಲಾಗಿದೆ. ದೇವಸ್ಥಾನದ ಥೀಮ್​ನಲ್ಲಿ ಸೆಟ್ ನಿರ್ಮಾಣ ಆಗಿದೆ. ಶಿವ-ಪಾರ್ವತಿ ಮುಂತಾದ ದೇವರ ವಿಗ್ರಹಗಳನ್ನು ಇರಿಸಲಾಗಿದೆ. ಅನೇಕ ಸೆಲೆಬ್ರಿಟಿಗಳು, ಅಪಾರ ಸಂಖ್ಯೆಯ ಅಭಿಮಾನಿಗಳು ಈ ಮದುವೆಯಲ್ಲಿ ಭಾಗಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.