ಆನ್​ಲೈನ್ ಬೆಟ್ಟಿಂಗ್ ದಯವಿಟ್ಟು ಆಡಬೇಡಿ: ಅಭಿಮಾನಿಗಳಿಗೆ ಡಾಲಿ ಕಿವಿಮಾತು

ಆನ್​ಲೈನ್ ಬೆಟ್ಟಿಂಗ್ ದಯವಿಟ್ಟು ಆಡಬೇಡಿ: ಅಭಿಮಾನಿಗಳಿಗೆ ಡಾಲಿ ಕಿವಿಮಾತು

ಮದನ್​ ಕುಮಾರ್​
|

Updated on:Feb 05, 2025 | 10:05 AM

ನಟ ಡಾಲಿ ಧನಂಜಯ ಅವರು ಯಾವಾಗಲೂ ಸಮಾಜಮುಖಿಯಾಗಿ ಚಿಂತಿಸುತ್ತಾರೆ. ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಬಂದ ಅವರು ಅಭಿಮಾನಿಗಳಿಗೆ ಬುದ್ಧಿಮಾತು ಹೇಳಿದ್ದಾರೆ. ಸದಾ ಕಾಲ ಕೆಲವು ಗಂಡಸರು ಮೊಬೈಲ್​ನಲ್ಲಿ ಮುಳುಗಿರುತ್ತಾರೆ. ಆನ್​ಲೈನ್ ಬೆಟ್ಟಿಂಗ್​ಗೆ ಸಿಲುಕಿರುತ್ತಾರೆ. ಅದನ್ನು ತ್ಯಜಿಸಿ ಎಂದು ಡಾಲಿ ಅವರು ಬುದ್ಧಿ ಹೇಳಿದ್ದಾರೆ.

ಆನ್​ಲೈನ್ ಬೆಟ್ಟಿಂಗ್ ಹಾವಳಿಗೆ ಎಷ್ಟೋ ಜನರ ಬದುಕು ಹಾಳಾಗಿದೆ. ಅಂತಹ ಬೆಟ್ಟಿಂಗ್ ವಿರುದ್ಧ ಡಾಲಿ ಧನಂಜಯ ಗುಡುಗಿದ್ದಾರೆ. ಬೆಟ್ಟಿಂಗ್ ವ್ಯಸನಕ್ಕೆ ಒಳಗಾಗಬೇಡಿ ಎಂದು ಅಭಿಮಾನಿಗಳಿಗೆ ಡಾಲಿ ಕಿವಿಮಾತು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗಿಯಾಗಿದ್ದ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಎಲ್ಲರನ್ನೂ ಅವರು ಮದುವೆಗೆ ಆಹ್ವಾನಿಸಿದರು. ‘ಅಭಿಮಾನಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಕೊನೆವರೆಗೂ ನಿಮ್ಮ ಪ್ರೀತಿ ಹೀಗೆಯೇ ಇರಲಿ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 05, 2025 10:03 AM