ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಬಳ್ಳಾರಿ ಜೈಲಿನಿಂದ ದಾಸ ಕೊಟ್ಟ ಸಿಗ್ನಲ್ ಏನು?
ದರ್ಶನ್ ಅವರಿಗೆ ಜಾಮೀನು ಕೊಡಿಸಲು ಅವರ ಪರ ವಕೀಲರು ವಾದ ಮಾಡುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಜೈಲಿನ ಬಳಿ ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ದರ್ಶನ್ ಕೈ ಸನ್ನೆ ಮಾಡಿದ್ದಾರೆ. ಬೆನ್ನು ನೋವಿನ ನಡುವೆಯೂ ನಗು ನಗುತ್ತಾ ಅಭಿಮಾನಿಗಳಿಗೆ ಅವರು ಸಿಗ್ನಲ್ ಕೊಟ್ಟಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಭೇಟಿ ಮಾಡಲು ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಬಳ್ಳಾರಿ ಜೈಲಿಗೆ ತೆರಳಿದ್ದಾರೆ. ಈ ವೇಳೆ ದರ್ಶನ್ ಅವರನ್ನು ನೋಡಲು ಜೈಲಿನ ಹೊರಗೆ ಅಭಿಮಾನಿಗಳು ನೆರೆದಿದ್ದರು. ಸೆಲ್ನಿಂದ ದರ್ಶನ್ ಹೊರಗೆ ಬರುತ್ತಿದ್ದಂತೆಯೇ ಫ್ಯಾನ್ಸ್ ಜೈಕಾರ ಹಾಕಲು ಶುರು ಮಾಡಿದರು. ಈ ವೇಳೆ ದರ್ಶನ್ ಕೈ ಸನ್ನೆ ಮಾಡಿದರು. ‘ಸದ್ಯದಲ್ಲೇ ನಾನು ನಿಮಗಾಗಿ ಖಂಡಿತಾ ಹೊರಗೆ ಬರುತ್ತೇನೆ’ ಎಂಬ ರೀತಿಯಲ್ಲಿತ್ತು ಅವರ ಸಿಗ್ನಲ್. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us