ದರ್ಶನ್ ಇರುವ ಜೈಲು ಕೊಠಡಿ ಹೇಗಿದೆ? ಟಿವಿ ಇದೆಯೇ? ಖೈದಿಯೇ ಹೇಳಿದ ವಿವರ ಕೇಳಿ..
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅವರನ್ನು ಪ್ರತ್ಯೇಕವಾಗಿ ಒಂದು ಕೊಠಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಜೈಲು ಶಿಕ್ಷೆ ಮುಗಿಸಿ ಬಂದ ತುರುವನೂರು ಸಿದ್ದಾರೂಢ ಅವರು ವಿವರಿಸಿದ್ದಾರೆ. ‘ದರ್ಶನ್ ಅವರು ತುಂಬಾ ಕುಗ್ಗಿದ್ದಾರೆ. ವಿಐಪಿ ಟ್ರೀಟ್ಮೆಂಟ್ ಇಲ್ಲ. ಅದು ಹೆಸರಿಗಷ್ಟೇ ವಿಐಪಿ ಸೆಲ್’ ಎಂದಿದ್ದಾರೆ ಸಿದ್ದಾರೂಢ.
ಹೊರಗಡೆ ಇದ್ದಾಗ ನಟ ದರ್ಶನ್ ಅವರು ಐಷಾರಾಮಿ ಜೀವನ ನಡೆಸುತ್ತಿದ್ದರು. ಆದರೆ ಜೈಲಿನಲ್ಲಿ ಅವರ ಪರಿಸ್ಥಿತಿ ಕಷ್ಟವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ. ಅವರನ್ನು ವಿಐಪಿ ಕೊಠಡಿಯಲ್ಲಿ ಇರಿಸಲಾಗಿದೆ. ಆ ಕೊಠಡಿ ಯಾವ ರೀತಿ ಇರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಬಗ್ಗೆ ಈಗಾಗಲೇ ಜೈಲು ಶಿಕ್ಷೆ ಮುಗಿಸಿಬಂದಿರುವ ತುರುವನೂರು ಸಿದ್ದಾರೂಢ ಅವರು ಮಾತನಾಡಿದ್ದಾರೆ. ‘8-12 ಅಡಿ ಉದ್ದದ ಕೊಠಡಿ ಕೊಟ್ಟಿದ್ದಾರೆ. ಅದರಲ್ಲಿ ಟಿವಿ ಇದೆ. ಅದು ದರ್ಶನ್ ಅವರಿಗಾಗಿ ಸ್ಪೆಷಲ್ ಆಗಿ ನೀಡಿದ್ದಲ್ಲ. ಅಲ್ಲಿನ ಎಲ್ಲರಿಗೂ ಇರುತ್ತದೆ. 20 ಲೀಟರ್ ಕ್ಯಾನ್ ಹಾಗೂ ಒಂದು ಕುರ್ಚಿ ಇದೆ. ನೆಲದ ಮೇಲೆಯೇ ಮಲಗಬೇಕು. ಜೈಲಿನ ಊಟವನ್ನೇ ನೀಡುತ್ತಿದ್ದಾರೆ. ಮನೆ ಊಟ ನೀಡಿಲ್ಲ. ಕೆಲವು ಪುಸ್ತಕಗಳನ್ನು ದರ್ಶನ್ ಓದುತ್ತಿದ್ದಾರೆ’ ಎಂದು ತುರುವನೂರು ಸಿದ್ದಾರೂಢಾ ಹೇಳಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

