‘ದರ್ಶನ್ ಅಪ್ಪಟ ಬಂಗಾರ’: ಚಾಲೆಂಜಿಂಗ್ ಸ್ಟಾರ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು

| Updated By: ಮದನ್​ ಕುಮಾರ್​

Updated on: Apr 03, 2025 | 8:45 PM

ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ನಟ ದರ್ಶನ್ ಅವರಿಗೆ ಸಂಕಷ್ಟ ಎದುರಾಯಿತು. ಆದರೂ ಕೂಡ ಅವರು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದನ್ನು ನಿಲ್ಲಿಸಿಲ್ಲ. ಅದಕ್ಕೆ ಇಲ್ಲಿದೆ ಲೇಟೆಸ್ಟ್ ಉದಾಹರಣೆ. ಆ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಹಿರಿಯ ನಟಿ ಶೈಲಶ್ರೀ ಸುದರ್ಶನ್ (Shailashree Sudarshan) ಅವರಿಗೆ ನಟ ದರ್ಶನ್ ಅವರು ನೆರವಾಗಿದ್ದಾರೆ. ಆ ಕುರಿತು ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು (Ganesh Kasaragod) ಅವರು ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದಾಗಿ ದರ್ಶನ್ (Darshan) ಅವರು ಈಗ ಸ್ವತಃ ಕಷ್ಟದಲ್ಲಿ ಇದ್ದಾರೆ. ಹಾಗಿದ್ದರೂ ಕೂಡ ಅವರು ಚಿತ್ರರಂಗದ ಇತರರಿಗೆ ನೆರವು ನೀಡಿದ್ದಾರೆ. ‘ನಾನು ಕಂಡ ದರ್ಶನ್ ಅಪ್ಪಟ ಬಂಗಾರ. ನನ್ನ ಹೃದಯದಲ್ಲಿ ಅವರಿಗೆ ದೊಡ್ಡ ಸ್ಥಾನ ಇದೆ’ ಎಂದು ಹೇಳಿರುವ ಗಣೇಶ್ ಕಾಸರಗೋಡು ಅವರು ತಮ್ಮ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.