‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್ ಗರಂ
‘ದೇಶದಲ್ಲಿ ಇರುವ ಪ್ರತಿಯೊಬ್ಬ ಆರೋಪಿ ಮತ್ತು ಅಪರಾಧಿಗೆ ಕೆಲವು ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಹಾಸಿಗೆ, ದಿಂಬು, ಕನ್ನಡಿ, ಆರ್ಓ ನೀರು ಮುಂತಾದ್ದನ್ನು ಪಡೆಯುವುದು ಆರೋಪಿಯ ಮೂಲಭೂತ ಹಕ್ಕು. ಅದನ್ನು ಯಾರೂ ತಿರಸ್ಕರಿಸುವಂತಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ. ಈ ಕುರಿತು ಜೈಲರ್ಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಪರ ವಕೀಲರು ಮಾಧ್ಯಮಗಳ ಎದುರು ಗರಂ ಆಗಿದ್ದಾರೆ. ದರ್ಶನ್ ಭೇಟಿ ಬಳಿಕ ಮಾತನಾಡಿದ ಅವರು, ‘ದರ್ಶನ್ ಅವರಿಗೆ ಬೆನ್ನು ನೋವು ಇದೆ. ಜೈಲರ್ಗೆ ಮನವಿ ಮಾಡಿದ್ದೇವೆ. ಜೈಲಿನ ಮ್ಯಾನುವಲ್ ಪ್ರಕಾರ ಕೊಡಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಕೊಡಿ ಅಂತ ಹೇಳಿದ್ದೇವೆ. ದರ್ಶನ್ ಮಾತ್ರವಲ್ಲದೇ ಬೇರೆ ಖೈದಿಗಳಿಗೂ ಏನೆಲ್ಲ ಕೊಡಬೇಕು ಎಂಬುದನ್ನು ಜೈಲರ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us