ದರ್ಶನ್ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್
ಚಾರ್ಜ್ಶೀಟ್ ಸಲ್ಲಿಕೆ ಬಳಿಕ ನಟ ದರ್ಶನ್ಗೆ ಢವಢವ ಹೆಚ್ಚಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ವಿರುದ್ಧ ಅನೇಕ ಸಾಕ್ಷಿಗಳು ಸಂಗ್ರಹ ಆಗಿವೆ. ಪವಿತ್ರಾ ಗೌಡ ಮುಂತಾದ ಆರೋಪಿಗಳು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ದರ್ಶನ್ ಪರ ವಕೀಲರು ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಎ2 ಆರೋಪಿ ಆಗಿರುವ ದರ್ಶನ್ ಪರ ವಕೀಲರಾದ ಶಿವಕುಮಾರ್ ಅವರು ಮಾತಾಡಿದ್ದಾರೆ. ‘ನಾವು ಇನ್ನೂ ಚಾರ್ಜ್ಶೀಟ್ ನೋಡಿಲ್ಲ. ವಿಚಾರಣೆ ಸೆ.12ಕ್ಕೆ ಮುಂದೂಡಿಕೆ ಆಗಿದೆ. ಸಿಡಿ, ಪೆನ್ಡ್ರೈವ್ ನೋಡಬೇಕು. ಪೂರ್ತಿ ಚಾರ್ಜ್ಶೀಟ್ ಎಗ್ಸಿಬಿಟ್ ಕೊಟ್ಟ ನಂತರ ಜಾಮೀನು ಅರ್ಜಿ ಸಲ್ಲಿಸುತ್ತೇವೆ. ಎಲ್ಲ ವಿವರನ್ನು 12ರಂದು ಕೊಡುವುದಾಗಿ ಎಸ್ಪಿಪಿ ಹೇಳಿದ್ದಾರೆ’ ಎಂದಿದ್ದಾರೆ ಶಿವಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.