ಇನ್ಮುಂದೆ ಎಲ್ಲೇ ಮೆಟ್ರೋ ಮಾಡಿದ್ರೂ ಡಬಲ್ ಡೆಕ್ಕರ್ ಮಾಡಲು ತಿರ್ಮಾನ: ಡಿಕೆ ಶಿವಕುಮಾರ್
ಬ್ರ್ಯಾಂಡ್ ಬೆಂಗಳೂರು ನಿರ್ವಹಣೆ ಹಾಗೂ ಕಾಮಗಾರಿ ಸಂಬಂಧ ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಮೆಟ್ರೋ-ಫ್ಲೈಓವರ್ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಮೆಟ್ರೋ ಮಾಡಿದರೂ ಕೂಡ ಡಬಲ್ ಡೆಕ್ಕರ್ ಮೆಟ್ರೋ ಮಾಡುವ ಪ್ಲ್ಯಾನ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು, ಜುಲೈ 27: ಬ್ರ್ಯಾಂಡ್ ಬೆಂಗಳೂರು ನಿರ್ವಹಣೆ ಹಾಗೂ ಕಾಮಗಾರಿ ಸಂಬಂಧ ಬಿಬಿಎಂಪಿ ಅಧಿಕಾರಿಗಳು, ಬೆಂಗಳೂರಿನ ಶಾಸಕರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಭೆ ಮಾಡಿದ್ದು, ಟ್ರಾಫಿಕ್, ಕಸ, ಕನ್ಸ್ಟ್ರಕ್ಷನ್, ಮೆಟ್ರೋ, ಎಲಿವೇಟೆಡ್ ಕಾರಿಡಾರ್ ಬಗ್ಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಭೆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಎಲ್ಲೂ ಕೂಡ ಅಕ್ವಿಜೇಶನ್ ಮಾಡುವುದಕ್ಕೆ ಆಗಲ್ಲ. ಮುಂದಿನ ದಿನಗಳಲ್ಲಿ ಎಲ್ಲೇ ಮೆಟ್ರೋ (Namma Metro) ಮಾಡಿದರೂ ಡಬಲ್ ಡೆಕ್ಕರ್ ಮೆಟ್ರೋ ಮಾಡುವ ತೀರ್ಮಾನ ಆಗಿದೆ. ಅದರ ವೆಚ್ಚವನ್ನು ಕಾರ್ಪೊರೇಷನ್ ಮತ್ತು ಬಿಎಂಆರ್ಸಿಎಲ್ ಇಬ್ಬರು ಕೂಡ ಭರಿಸುತ್ತಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಅಭಿವೃದ್ದಿಗೆ 70 ಸಾವಿರ ಸಲಹೆಗಳು ಬಂದಿದ್ದವು. ಟ್ರಾಫಿಕ್, ಕಸ, ಕಂಸ್ಟ್ರಕ್ಷನ್ ವಿಚಾರ ಮೆಟ್ರೋ, ಎಲಿವೇಟೆಡ್ ಕಾರಿಡಾರ್ ಕುರಿತು ಚರ್ಚಿಸಿ ಪ್ರಸ್ಥಾವನೆ ಸಲ್ಲಿಸಿದ್ದಾರೆ. ಸರ್ಕಾರ ಏನೇ ತೀರ್ಮಾನಿಸುವ ಹಕ್ಕಿದ್ದರೂ ಎಲ್ಲ ಶಾಸಕರ ಜೊತೆ ಚರ್ಚೆ ಮಾಡುವ ಮಾತು ಕೊಟ್ಟಿದ್ದೆ. 18.5 ಕಿಮಿ ಎಸ್ಟಿ ಮಾಲ್ ಟು ಸಿಲ್ಕ್ ಬೋರ್ಡ್ ಜಂಕ್ಷನ್ ಟನಲ್ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ
ನಾಲ್ಕು ಕಡೆ ಕಸ ವಿಲೇವಾರಿಗೆ ಸಪರೇಟ್ 100 ಎಕರೇ ಜಾಗ ಅಥವಾ ಪರ್ಚೇಜ್ ಮಾಡಿ ಬರ್ನ್ ಮಾಡುವ ಬಗ್ಗೆ ಮಾತಾಡಿದೆ. ಟ್ರಾಫಿಕ್ ವಿಚಾರದಲ್ಲಿ ಪೋಲೀಸರಿಗೆ ಜವಾಬ್ದಾರಿ ಕೊಡಲಾಗಿದೆ. ರಸ್ತೆ ಮಧ್ಯೆ ಗಾಡಿ ನಿಲ್ಲಿಸೋಕೆ ಅವಕಾಶ ಇಲ್ಲ. 17 ರಿಂದ 18 ಕಡೆ ಜಾಗ ಗುರುತು ಮಾಡಿದ್ದೇವೆ. ಸಿಗ್ನಲ್ ಫ್ರೀ ಕಾರಿಡಾರ್ಗೆ 12000 ಕೋಟಿ ಮೀಸಲಿಟ್ಟಿದೆ. ಬೆಂಗಳೂರು ನಗರಕ್ಕೆ ಸ್ಕೈ ಡೆಕ್ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ನೈಸ್ ರೋಡ್ ನಲ್ಲಿ ಒಂದು ಜಾಗ ಮಾಡಿದ್ದೇವೆ. ಬೆಂಗಳೂರು ನೋಡೋರಿಗೆ ಅನುಕೂಲ ಆಗಬೇಕಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.