ದೇವೇಗೌಡ ಮತ್ತು ಕುಮಾರಸ್ವಾಮಿಯವರ ಪ್ರಯತ್ನ ಮತ್ತು ಹಠ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ: ಯೋಗೇಶ್ವರ್

|

Updated on: Nov 14, 2024 | 5:06 PM

ಚುನಾವಣೆಯ ಕೊನೆಹಂತದಲ್ಲಿ ಕುಮಾರಸ್ವಾಮಿ ಬಗ್ಗೆ ಜಮೀರ್ ಅಹ್ಮದ್ ಮಾಡಿದ ಕಾಮೆಂಟ್ ಸಹ ತಿರುಗೇಟಾಗಿ ಪರಿಣಮಿಸಿದೆ, ಅದರಿಂದ ಲಾಭ ಮತ್ತು ನಷ್ಟ ಎರಡೂ ಆಗಿದೆ, ಅದರೆ ಜೆಡಿಎಸ್ ಪಕ್ಷ ಬಿಟ್ಟು ತಮ್ಮೊಂದಿಗೆ ಕೈ ಜೋಡಿಸಿದ್ದ ಕೆಲ ಮುಖಂಡರು ವಾಪಸ್ಸು ಹೋಗಿ ಜೆಡಿಎಸ್ ಮತ ಹಾಕಿದ್ದು ಹಿನ್ನಡೆಯಾಗಿದೆ ಎಂದು ಯೋಗೇಶ್ವರ್ ಹೇಳಿದರು.

ರಾಮನಗರ: ಫಲಿತಾಂಶಕ್ಕೆ ಇನ್ನೂ ಒಂದು ವಾರವಿದೆ ಆದರೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರಿಂದ ಆಗಲೇ ಆಲಾಪನೆ ಮತ್ತು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಶುರುವಾಗಿದೆ. ಇವತ್ತು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಯೋಗೇಶ್ವರ್, ಜೆಡಿಎಸ್ ಪ್ರಮುಖ ಮುಖಂಡರಾದ ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ ಅವರ ಅವಿರತ ಹೋರಾಟ, ನಿಖಿಲ್​ನನ್ನು ಗೆಲ್ಲಿಸಿಯೇ ತೀರಬೇಕೆಂಬ ಹಠ ಮತ್ತು ಛಲ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ, ನಿರಾಶದಾಯಕ ಸ್ಥಿತಿಯೇನೂ ಇಲ್ಲ, ಸಮಬಲದ ಹೋರಾಟ ನಡೆದಿದೆ, ಯಾರೇ ಗೆದ್ದರೂ ಅಂತರ ಕೂದಲೆಳೆಯದಾಗಿರುತ್ತದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    Karnataka Bypolls: ಚನ್ನಪಟ್ಟಣದ ಜನ ಈ ಬಾರಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ: ಶೀಲಾ ಯೋಗೇಶ್ವರ್

Published on: Nov 14, 2024 05:05 PM