ವಾಪಸ್ಸು ಬಂದು ಶರಣಾಗೆಂದು ಹೇಳುವ ದೇವೇಗೌಡರೇ ಪ್ರಜ್ವಲ್ ನನ್ನು ವಿದೇಶಕ್ಕೆ ಕಳಿಸಿದ್ದು: ಸಿದ್ದರಾಮಯ್ಯ
ನನ್ನ ಪ್ರಕಾರ ಪ್ರಜ್ವಲ್ನನ್ನು ಕಳಿಸಿದ್ದೇ ಅವರು, ಸಾರ್ವಜನಿಕ ಸಹಾನುಭೂತಿ ಗಿಟ್ಟಿಸಲು ಪತ್ರ ಬರೆದಿದ್ದಾರೆ ಎಂದು ಹೇಳುತ್ತಾ ಸಿದ್ದರಾಮಯ್ಯ ಅಲ್ಲಿಂದ ಹೊರಟುಬಿಟ್ಟರು. ಪ್ರಜ್ವಲ್ ರೇವಣ್ಣನ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
ಮೈಸೂರು: ಸಾಮಾನ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾಜಿ ಪ್ರಧಾನಿ ದೇವೇಗೌಡರ (former PM HD Devegowda) ಬಗ್ಗೆ ಉಗ್ರವಾದ ಟೀಕೆಗಳನ್ನು ಮಾಡಲ್ಲ, ಹಿರಿಯ ಮುತ್ಸದ್ದಿ ಬಗ್ಗೆ ಈಗಲೂ ಅವರು ಗೌರವ ಇಟ್ಟುಕೊಂಡಿದ್ದಾರೆ. ಆದರೆ ಮೈಸೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅವರು ತಮ್ಮ ರಾಜಕಾರಣದ ಗುರುವಿನ ಬಗ್ಗೆ ಒಂದು ತೀಕ್ಷ್ಣ ಪ್ರತಿಕ್ರಿಯೆ ಮಾಡಿದರು. ದೇವೇಗೌಡರು, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ (Prajwal Revanna) ಪತ್ರವೊಂದನ್ನು ಬರೆದಿದ್ದು ಅದರಲ್ಲಿ ಅವರು, ಇದು ನನ್ನ ಕೊನೆಯ ಎಚ್ಚರಿಕೆ, ನನ್ನ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ ಕೂಡಲೇ ಭಾರತಕ್ಕೆ ವಾಪಸ್ಸು ಬಂದು ತನಿಖಾಧಿಕಾರಿಗಳಿಗೆ ಶರಣಾಗಿ ವಿಚಾರಣೆ ಎದುರಿಸುವಂತೆ ಹೇಳಿದ್ದಾರೆ. ಅವರ ಪತ್ರದ ಸಂಗತಿಯನ್ನು ಸಿದ್ದರಾಮಯ್ಯನವರಿಗೆ ಪತ್ರಕರ್ತರು ಹೇಳಿದಾಗ, ನನ್ನ ಪ್ರಕಾರ ಪ್ರಜ್ವಲ್ ನನ್ನು ಕಳಿಸಿದ್ದೇ ಅವರು, ಸಾರ್ವಜನಿಕ ಸಹಾನುಭೂತಿ ಗಿಟ್ಟಿಸಲು ಪತ್ರ ಬರೆದಿದ್ದಾರೆ ಎಂದು ಹೇಳುತ್ತಾ ಅಲ್ಲಿಂದ ಹೊರಟುಬಿಟ್ಟರು. ಪ್ರಜ್ವಲ್ ರೇವಣ್ಣನ ಡಿಪ್ಲೋಮ್ಯಾಟಿಕ್ ಪಾಸ್ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ವಿರುದ್ಧ ಕಾನೂನು ಪ್ರಕಾರ ಕೇಂದ್ರದಿಂದ ಕ್ರಮ: ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯಗೆ ಪ್ರಲ್ಹಾದ್ ಜೋಶಿ ತಿರುಗೇಟು