ಮಂತ್ರಾಲಯ ಮಠದ ಕಾರಿಡಾರ್ನಲ್ಲಿ ಮಲಗಿದ್ದ ಭಕ್ತರಿಗೆ ಮಳೆ ಕಾಟ, ನೆರವಿಗೆ ಬಂದ ಶ್ರೀಗಳು
ನಿನ್ನೆ ರಾತ್ರಿ ಮಠದ ಕಾರಿಡಾರ್ ನಲ್ಲಿ ಮಲಗಿದ್ದ ಭಕ್ತರಿಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಕೂಡಲೇ ಮಠದ ಕಾರಿಡಾರ್ ಗೆ ಸುಬುಧೇಂದ್ರ ತೀರ್ಥರು ದೌಡಾಯಿಸಿದ್ದು ಭಕ್ತರ ಸಮಸ್ಯೆ ಆಲಿಸಿ ಭಕ್ತರಿಗೆ ಬೇರೆ ಮಠದ ಪ್ರಾಕಾರ ಮತ್ತು ಪ್ರವಚನ ಮಂಟಪದ ಒಳಗೆ ಮಲಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ರಾಯಚೂರು, ಆಗಸ್ಟ್.20: ಮಂತ್ರಾಲಯದ ಶ್ರೀ ರಾಘವೇಂದ್ರ ಮಹಾಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ನಿನ್ನೆ ರಾತ್ರಿ ಮಂತ್ರಾಲಯದ ರಾಯರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದ್ದಾರೆ. ಭಕ್ತರ ಆರಾಧ್ಯ ದೈವ ಮಂತ್ರಾಲಯದ ರಾಯರ ಸನ್ನಿಧಿ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ. ಲಕ್ಷಾಂತರ ಭಕ್ತರು ಕುಟುಂಬ ಸಮೇತರಾಗಿ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಆದರೆ ನಿನ್ನೆ ಸುರಿದ ಮಳೆಯಿಂದ ರಾಯರ ಆರಾಧನೆಗೆ ಬಂದಿದ್ದ ಭಕ್ತರಿಗೆ ಸಮಸ್ಯೆಯಾಗಿದೆ.
ಮಳೆ ಹಿನ್ನೆಲೆ ನಿನ್ನೆ ರಾತ್ರಿ ಮಠದ ಕಾರಿಡಾರ್ ನಲ್ಲಿ ಮಲಗಿದ್ದ ಭಕ್ತರಿಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಕೂಡಲೇ ಮಠದ ಕಾರಿಡಾರ್ ಗೆ ಸುಬುಧೇಂದ್ರ ತೀರ್ಥರು ದೌಡಾಯಿಸಿದ್ದು ಭಕ್ತರ ಸಮಸ್ಯೆ ಆಲಿಸಿ ಭಕ್ತರಿಗೆ ಬೇರೆ ಮಠದ ಪ್ರಾಕಾರ ಮತ್ತು ಪ್ರವಚನ ಮಂಟಪದ ಒಳಗೆ ಮಲಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಳಿಕ ವೃದ್ಧರು, ಮಕ್ಕಳ ಸಮೇತ ಮಠದ ಒಳಗಿನ ಪ್ರಾಕಾರದಲ್ಲಿ ಭಕ್ತರು ವಿಶ್ರಾಂತಿ ಪಡೆದಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ