ಎರಡನೇ ದಿನವೂ ಹಾಸನಾಂಬೆಯ ದರ್ಶನಕ್ಕೆ ಹಿಂಡುಗಳಲ್ಲಿ ಆಗಮಿಸುತ್ತಿರುವ ಭಕ್ತರು
ಹಾಸನಾಂಬೆ ದೇವಸ್ಥಾನವನ್ನು ಆಡಳಿತ ಮಂಡಳಿಯವರು ಗುರುವಾರ ತೆರೆದರೂ ಭಕ್ತರ ದರ್ಶನಕ್ಕಾಗಿ ಇವತ್ತು ಎರಡನೇ ದಿನ. ಕೇವಲ ಕರ್ನಾಟಕ ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳ ಜನ ಸಹ ದೇವಿಯ ದರ್ಶನಕ್ಕೆ ಬರುತ್ತಾರೆ. ದೇವಾಲಯದ ಬಾಗಿಲು ಬೆಳಗ್ಗೆ 4 ಗಂಟೆಗೆ ತೆರೆದು ರಾತ್ರಿ 11 ಗಂಟೆಯವರಗೆ ದರ್ಶನದ ಅವಕಾಶವಿರುತ್ತದೆ.
ಹಾಸನ: ವರ್ಷಕ್ಕೊಮ್ಮೆ ಮತ್ತು ಕೇವಲ ಸೀಮಿತ ಅವಧಿಗೆ ತೆರೆಯಲ್ಪಡುವ ಹಾಸನದ ಹಾಸನಾಂಬೆ ದೇವಾಲಯಕ್ಕೆ ಇಂದು ಕೂಡ ಭಕ್ತರ ದಂಡು. ದೃಶ್ಯಗಳಲ್ಲಿ ಕಾಣುವ ಹಾಗೆ ಎಲ್ಲ ವಯೋಮಾನದ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ. ಹಿರಿಯರು, ವಯೋವೃದ್ಧರು, ಕುಟುಂಬಸ್ಥರು, ಯುವಕ ಯುವತಿಯರು ಮತ್ತು ಮಕ್ಕಳನ್ನು ಹೊತ್ತ ತಂದೆತಾಯಿಗಳು ಸರತಿ ಸಾಲಲ್ಲಿ ನಿಂತು ಮುಂದೆ ಸಾಗುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಾಸನಾಂಬೆ ಬಳಿ ಡಿಕೆ ಶಿವಕುಮಾರ್ ಬೇಡಿಕೊಂಡಿದ್ದು ಹೀಗಂತೆ
Published on: Oct 26, 2024 11:40 AM