ಶ್ರಾವಣ ಮಾಸದ ಕೊನೆಯ ಶನಿವಾರ, ಮಾಲೂರಿನ ವೆಂಕಟರಮಣ ದೇವಸ್ಥಾನಕ್ಕೆ ಹರಿದುಬಂದ ಭಕ್ತಸಾಗರ
ಶ್ರಾವಣ ಮಾಸದಲ್ಲಿ ವೆಂಕಟರಮಣನ ದರ್ಶನ ಪಡೆದು ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಅದರಲ್ಲೂ ಕೊನೆಯ ಶನಿವಾರದಂದು ಭಕ್ತರು ದಂಡುದಂಡಾಗಿ ದೇವಸ್ಥಾನಕ್ಕೆ ತೆರಳಿ ತಮ್ಮ ಹರಕೆಗಳನ್ನು ದೇವರಿಗೆ ಸಲ್ಲಿಸುತ್ತಾರೆ. ಇದು ಪ್ರತಿ ವರ್ಷ ನಡೆಯುವ ಪದ್ಧತಿ.
ಕೋಲಾರ: ಇವತ್ತು ಶ್ರಾವಣ ಮಾಸದ ಕೊನೆಯ ಶನಿವಾರ. ಜಿಲ್ಲೆಯ ಮಾಲೂರು ತಾಲೂಕಿನಲ್ಲಿರುವ ಚಿಕ್ಕ ತಿರುಪತಿ ಪ್ರಸನ್ನ ವೆಂಕಟರಮಣನ ಸ್ವಾಮಿ ದೇವಾಲಯದಲ್ಲಿ ಬೆಳಗಿನ ಜಾವವೇ ಭಕ್ತಸಾಗರ ಹರಿದು ಬಂದಿತ್ತು. ನಮ್ಮ ಕೋಲಾರ ವರದಿಗಾರ ನೀಡುವ ಮಾಹಿತಿ ಪ್ರಕಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಜನ ಸರತಿ ಸಾಲಲ್ಲಿ ಅಗಮಿಸಿ ವೆಂಕಟರಮಣನ ದರ್ಶನ ಪಡೆದು ಕೃತಾರ್ಥರಾದರು. ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಶ್ರಾವಣ ಮಾಸದ ಕೊನೆಯ ಶನಿವಾರವನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆ; ಇಲ್ಲಿದೆ ದರ ಪಟ್ಟಿ
Latest Videos