ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ

Edited By:

Updated on: Aug 18, 2026 | 7:31 PM

ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಲು ಧನ್ವೀರ್ ಗೌಡ, ಮೀನಾ ತೂಗುದೀಪ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರು ಒಟ್ಟಿಗೆ ಬಂದಿದ್ದಾರೆ. ಭೇಟಿ ಮಾಡಿದ ಬಳಿಕ ಧನ್ವೀರ್ ಗೌಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಿಮ್ಮ ನಡುವೆ ಮನಸ್ತಾಪ ಇದೆಯಾ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು.

ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಲು ಧನ್ವೀರ್ ಗೌಡ, ಮೀನಾ ತೂಗುದೀಪ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರು ಒಟ್ಟಿಗೆ ಬಂದಿದ್ದಾರೆ. ಭೇಟಿ ಮಾಡಿದ ಬಳಿಕ ಧನ್ವೀರ್ ಗೌಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಿಮ್ಮ ನಡುವೆ ಮನಸ್ತಾಪ ಇದೆಯಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ‘ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಆರಾಮಾಗಿದ್ದಾರೆ. ಯಾವುದೇ ಮನಸ್ತಾಪ ನಮ್ಮ ನಡುವೆ ಇಲ್ಲ. ಮನಸ್ತಾಪ ಇದೆ ಅಂತ ಹೇಳಿದವರನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಿ. ಅವರ ಜೊತೆ ಮಾತನಾಡೋಣ’ ಎಂದು ಧನ್ವೀರ್ ಗೌಡ (Dhanveer Gowda) ಅವರು ಹೇಳಿದ್ದಾರೆ. ಮೊದಲೆಲ್ಲ ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರು ಜೊತೆಯಾಗಿ ಜೈಲಿಗೆ ಬರುತ್ತಿದ್ದರು. ನಂತರ ಪ್ರತ್ಯೇಕವಾಗಿ ಬರಲು ಆರಂಭಿಸಿದರು. ಆ ಬಳಿಕ ಮನಸ್ತಾಪದ ಬಗ್ಗೆ ವದಂತಿ ಹಬ್ಬಲು ಶುರುವಾಗಿತ್ತು. ಈಗ ಅವರು ಮತ್ತೆ ಜೊತೆಯಾಗಿ ಜೈಲಿಗೆ ಬಂದಿದ್ದು, ಮನಸ್ತಾಪದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us