ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ

Edited By:

Updated on: Apr 14, 2026 | 9:55 PM

ಧರ್ಮ ಕೀರ್ತಿರಾಜ್ ಹಾಗೂ ಅನುಷಾ ರೈ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಸಿನಿಮಾಗಳಲ್ಲಿ ಸಹ ಜೋಡಿಯಾಗಿ ನಟಿಸಿ ಗಮನ ಸೆಳೆದರು. ರಿಯಲ್ ಲೈಫ್​ನಲ್ಲೂ ಅವರು ಜೋಡಿಯಾಗಲಿ ಎಂಬ ಬಯಕೆ ಅಭಿಮಾನಿಗಳಿಗೆ ಇದೆ. ಆ ಕುರಿತು ಧರ್ಮ ಕೀರ್ತಿರಾಜ್ ಮಾತನಾಡಿದ್ದಾರೆ.

ನಟ ಧರ್ಮ ಕೀರ್ತಿರಾಜ್ ಮತ್ತು ನಟಿ ಅನುಷಾ ರೈ (Anusha Rai) ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಸಿನಿಮಾಗಳಲ್ಲಿ ಕೂಡ ಅವರು ಜೋಡಿಯಾಗಿ ನಟಿಸಿ ಗಮನ ಸೆಳೆದಿದ್ದಾರೆ. ‘ಬೆಂಗಳೂರು ಇನ್’ ಸಿನಿಮಾದಲ್ಲಿ ಅವರಿಬ್ಬರು ಮತ್ತೊಮ್ಮೆ ತೆರೆಹಂಚಿಕೊಂಡಿದ್ದಾರೆ. ರಿಯಲ್ ಲೈಫ್​ನಲ್ಲೂ ಅವರು ಜೋಡಿಯಾಗಲಿ ಎಂಬ ಬಯಕೆ ಅಭಿಮಾನಿಗಳಿಗೆ ಇದೆ. ಆ ಬಗ್ಗೆ ಧರ್ಮ ಕೀರ್ತಿರಾಜ್ (Dharma Keerthiraj) ಅವರು ಮಾತನಾಡಿದ್ದಾರೆ. ‘ಸ್ನೇಹಿತೆಯಾಗಿ, ಸಹ-ನಟಿಯಾಗಿ ನಾನು ಅನುಷಾ ಅವರನ್ನು ಗೌರವಿಸುತ್ತೇನೆ. ಅವರಿಗೂ ಅದೇ ಭಾವನೆ ಇದೆ. ಅವರ ಮತ್ತು ನನ್ನ ಜೀವನ ಪ್ರತ್ಯೇಕವಾಗಿದೆ. ಪರದೆ ಮೇಲೆ ಜನರು ನಮ್ಮ ಜೋಡಿಯನ್ನು ಇಷ್ಟಪಡುತ್ತಾರೆ. ಅದನ್ನು ನಾವು ಇಲ್ಲ ಅಂತ ಹೇಳಿಲ್ಲ. ಆದರೆ ವೈಯಕ್ತಿಕ ಜೀವನದ ವಿಷಯ ಬಂದಾಗ ನಮ್ಮ ಲೈಫ್ ಬೇರೆ ಬೇರೆ ಆಗಿದೆ’ ಎಂದು ಧರ್ಮ ಕೀರ್ತಿರಾಜ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Apr 14, 2026 09:55 PM
Follow Us