ಧರ್ಮೇಂದ್ರ ಪ್ರಧಾನ್ ರಾಜೀನಾಮೆ ತನಕ ಹೋರಾಡಿದ ಸಿಜೆಪಿಯ ಮುಂದಿನ ನಡೆ ಏನು?

Updated on: Jul 25, 2026 | 3:48 PM

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ, ಸಿಜೆಪಿ ತನ್ನ ಪ್ರತಿಭಟನೆ ಇಲ್ಲಿಗೆ ನಿಲ್ಲಿಸುತ್ತಾ ಅಥವಾ ಮುಂದುವರೆಸುತ್ತಾ ಎನ್ನುವ ಬಗ್ಗೆ ಇನ್ನೂ ಗೊಂದಲದಲ್ಲಿದೆ.  ಈ ಬಗ್ಗೆ ಕಾಕ್ರೋಚ್ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮಾತನಾಡಿ, "ನಮ್ಮ ಮೂರು ಬೇಡಿಕೆಗಳನ್ನು ನೀವು (ಕೇಂದ್ರ ಸರ್ಕಾರ) ಲಿಖಿತವಾಗಿ ಬರೆದುಕೊಟ್ಟರೆ ಪ್ರತಿಭಟನೆ ನಿಲ್ಲಿಸಿ ನಾವು ಮನೆಗೆ ಹೋಗುತ್ತೇವೆ. ದೇಶಾದ್ಯಂತ ಶಾಂತಿಯುತವಾಗಿ ಮೇಣದಬತ್ತಿ ಮೆರವಣಿಗೆ ನಡೆಸಲು ನಾವು ಅನುಮತಿ ಕೋರಿದ್ದೇವೆ. ಸಂಜೆ 6:00 ಗಂಟೆಗೆ ದೇಶಾದ್ಯಂತ ಮೇಣದಬತ್ತಿ ಮೆರವಣಿಗೆ ನಡೆಸಬೇಕು" ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನವದೆಹಲಿ, (ಜುಲೈ 25): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ, ಸಿಜೆಪಿ ತನ್ನ ಪ್ರತಿಭಟನೆ ಇಲ್ಲಿಗೆ ನಿಲ್ಲಿಸುತ್ತಾ ಅಥವಾ ಮುಂದುವರೆಸುತ್ತಾ ಎನ್ನುವ ಬಗ್ಗೆ ಇನ್ನೂ ಗೊಂದಲದಲ್ಲಿದೆ.  ಈ ಬಗ್ಗೆ ಕಾಕ್ರೋಚ್ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮಾತನಾಡಿ, “ನಮ್ಮ ಮೂರು ಬೇಡಿಕೆಗಳನ್ನು ನೀವು (ಕೇಂದ್ರ ಸರ್ಕಾರ) ಲಿಖಿತವಾಗಿ ಬರೆದುಕೊಟ್ಟರೆ ಪ್ರತಿಭಟನೆ ನಿಲ್ಲಿಸಿ ನಾವು ಮನೆಗೆ ಹೋಗುತ್ತೇವೆ. ದೇಶಾದ್ಯಂತ ಶಾಂತಿಯುತವಾಗಿ ಮೇಣದಬತ್ತಿ ಮೆರವಣಿಗೆ ನಡೆಸಲು ನಾವು ಅನುಮತಿ ಕೋರಿದ್ದೇವೆ. ಸಂಜೆ 6:00 ಗಂಟೆಗೆ ದೇಶಾದ್ಯಂತ ಮೇಣದಬತ್ತಿ ಮೆರವಣಿಗೆ ನಡೆಸಬೇಕು” ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇನ್ನೊಂದೆಡೆ  ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುತ್ತಿದ್ದಂತೆಯೇ ಸಿಜೆಪಿ ಕಾರ್ಯಕರ್ಯಕರ್ತರು, ಮುಖಂಡರು ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಇದು ನಮ್ಮ ಧೈರ್ಯಕ್ಕೆ ಹೋರಾಟಕ್ಕೆ ಸಿಕ್ಕ ಜಯ, ನಾವು ನಿರ್ಭಯದಿಂದ ಹೋರಾಡಿದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರಿಗೂ ಭಯಪಡಬೇಕಿಲ್ಲ. ನಿರ್ಭೀತ ಹೋರಾಟದಿಂದ ನಾವು ಯಾರ ರಾಜೀನಾಮೆಯನ್ನು ಬೇಕಾದರೂ ಪಡೆಯಬಹುದು ಎನ್ನುವುದಕ್ಕೆ ಇದು ಪುರಾವೆ ಎಂದಿದ್ದಾರೆ.

ಇದನ್ನೂ ನೋಡಿ: ಧರ್ಮೇಂದ್ರ ಪ್ರಧಾನ್ ಖಾತೆಯನ್ನು ನುಂಗಿದ ‘ಜಿರಲೆ’, ಕೊನೆಗೂ ರಾಜೀನಾಮೆ ಸಲ್ಲಿಕೆ

Published on: Jul 25, 2026 03:44 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More