AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧುರಂಧರ್ 2 ಸಿನಿಮಾ ರಿಯಲ್ಲಾ? ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!

ಧುರಂಧರ್ 2 ಸಿನಿಮಾ ರಿಯಲ್ಲಾ? ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!

ಅಕ್ಷಯ್​ ಪಲ್ಲಮಜಲು​​
|

Updated on:Mar 23, 2026 | 3:05 PM

Share

ಧುರಂಧರ್ 2 ಸಿನಿಮಾ ತನ್ನ ಪೀಕ್ ಡಿಟೇಲಿಂಗ್‌ಗಾಗಿ ಪ್ರಶಂಸೆಗೆ ಪಾತ್ರವಾಗಿದೆ. ಅದರಲ್ಲೂ ಎಸ್ಪಿ ಅಸ್ಲಾಂ ಹತ್ಯೆಯ ದೃಶ್ಯ 2014ರ ನೈಜ ಘಟನೆಯನ್ನು ಯಥಾವತ್ತಾಗಿ ಮರುಸೃಷ್ಟಿಸಿದೆ. ನಿರ್ದೇಶಕ ಆದಿತ್ಯ ಧರ್ ಅವರ ತಿಂಗಳುಗಳ ಸಂಶೋಧನೆ ಫಲವಾಗಿ, ಸಿನಿಮಾದ ದೃಶ್ಯಗಳು ವಾಸ್ತವ ಘಟನೆಯ ಸಿಸಿಟಿವಿ/ಡ್ಯಾಶ್‌ಕ್ಯಾಮ್ ತುಣುಕುಗಳೊಂದಿಗೆ ತಾಳೆ ಹೊಂದಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ "Masterpiece Research" ಎಂದು ವೈರಲ್ ಆಗುತ್ತಿದೆ.

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವುದಷ್ಟೇ ಅಲ್ಲದೆ, ಅದರ ‘ಪೀಕ್ ಡಿಟೇಲಿಂಗ್’ (Peak Detailing) ನಿಂದಾಗಿ ಸಿನೆಮಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಎಸ್‌ಪಿ ಅಸ್ಲಾಂ ಅವರ ಹತ್ಯೆಯ ದೃಶ್ಯವು 2014ರಲ್ಲಿ ನಡೆದ ನೈಜ ಘಟನೆಯನ್ನು ಯಥಾವತ್ತಾಗಿ ಪ್ರತಿಬಿಂಬಿಸಿದೆ ಎಂಬುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ಎಸ್‌ಪಿ ಅಸ್ಲಾಂ ಅವರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯ ಪ್ರತಿಯೊಂದು ಹಂತವು  2014ರ ಸಿಸಿಟಿವಿ/ಡ್ಯಾಶ್‌ಕ್ಯಾಮ್ ದೃಶ್ಯಗಳನ್ನೇ ಹೋಲುತ್ತದೆ. ನಿರ್ದೇಶಕ ಆದಿತ್ಯ ಧರ್ ಅವರು ಈ ದೃಶ್ಯಕ್ಕಾಗಿ ತಿಂಗಳುಗಟ್ಟಲೆ ಸಂಶೋಧನೆ ನಡೆಸಿದ್ದಾರೆ. ವಾಸ್ತವದಲ್ಲಿ ನಡೆದ ಗುಂಡಿನ ಚಕಮಕಿ, ದಾಳಿಕೋರರ ಚಲನವಲನ ಮತ್ತು ಅಂದಿನ ಭೀಕರ ವಾತಾವರಣವನ್ನು ಸಿನಿಮಾದಲ್ಲಿ ಮರುಸೃಷ್ಟಿಸಲಾಗಿದೆ. 2014ರ ಆ ನೈಜ ವಿಡಿಯೋ ಮತ್ತು ಸಿನಿಮಾದ ಕ್ಲಿಪ್‌ಗಳನ್ನು ಒಟ್ಟಾಗಿ ಸೇರಿಸಿ ನೆಟ್ಟಿಗರು “Masterpiece Research” ಎಂದು ಶ್ಲಾಘಿಸುತ್ತಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 23, 2026 03:01 PM
Follow Us