‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್ ಕುಮಾರ್
‘ನಾಗುಗೆ ವಧು ಬೇಕಾಗಿದೆ’ ಎಂಬ ಭಿನ್ನ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ಆರ್.ಕೆ. ಅವರು ನಿರ್ದೇಶನ ಮಾಡಿದ್ದಾರೆ. ದತ್ತು ಪೂಜಾರಿ, ಸೋನಿಕಾ, ಚಿತ್ರಲ್ ರಂಗಸ್ವಾಮಿ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಚಿತ್ರದ ಟೈಟಲ್ ಬಗ್ಗೆ ಖ್ಯಾತ ನಿರ್ದೇಶಕ, ಗೀತಸಾಹಿತಿ ಚೇತನ್ ಕುಮಾರ್ ಅವರು ಮಾತನಾಡಿದರು.
‘ನಾಗುಗೆ ವಧು ಬೇಕಾಗಿದೆ’ (Naaguge Vadhu Bekaagide) ಎಂಬ ಭಿನ್ನ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ಆರ್.ಕೆ. ಅವರು ನಿರ್ದೇಶನ ಮಾಡಿದ್ದಾರೆ. ದತ್ತು ಪೂಜಾರಿ, ಸೋನಿಕಾ, ಚಿತ್ರಲ್ ರಂಗಸ್ವಾಮಿ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಚಿತ್ರದ ಟೈಟಲ್ ಬಗ್ಗೆ ಖ್ಯಾತ ನಿರ್ದೇಶಕ, ಗೀತಸಾಹಿತಿ ಚೇತನ್ ಕುಮಾರ್ ಅವರು ಮಾತನಾಡಿದರು. ‘ಒಂದು ಸಿನಿಮಾಗೆ ಶೀರ್ಷಿಕೆ ಬಹಳ ಮುಖ್ಯ. ನಿರ್ದೇಶಕರು ಬಂದು ಒಮ್ಮೆ ಭೇಟಿ ಆದರು. ಸಿನಿಮಾ ಮೇಲೆ ಅವರಿಗೆ ಬಹಳ ಪ್ರೀತಿ ಇದೆ. ಸಿನಿಮಾದ ಕಥೆಯ ಎಳೆ ಹೇಳಿದರು. ನನಗೆ ವಿಶೇಷ ಎನಿಸಿತು. ಇಷ್ಟು ವಿಶೇಷವಾದ ಶೀರ್ಷಿಕೆಯನ್ನು ನಾನು ಇದುವರೆಗೂ ಕೇಳಿರಲಿಲ್ಲ. ಇಂದಿನ ಕಾಲದಲ್ಲಿ ಮದುವೆಗೆ ಹುಡುಗಿ ಹುಡುಕುವುದು ಕಷ್ಟ ಇದೆ. ಈ ಸಿನಿಮಾವನ್ನು ಕುಟುಂಬ ಸಮೇತವಾಗಿ ನೋಡಬಹುದು. ಆ ಭರವಸೆ ನನಗೆ ಇದೆ. ಎಲ್ಲರೂ ಈ ಸಿನಿಮಾಗೆ ಹಾರೈಸಿ. ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ’ ಎಂದು ಚೇತನ್ ಕುಮಾರ್ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ

