ನನಗೆ ಟಿಕೆಟ್ ಮಿಸ್ಸಾಗಿದ್ದು ಭೌಗೋಳಿಕ ಅನ್ಯಾಯ ಮತ್ತು ಕಾರ್ಯಕರ್ತರಿಗಾಗಿರುವ ಮೋಸ: ರಘುಪತಿ ಭಟ್
ಬಿಎಸ್ ಯಡಿಯೂರಪ್ಪರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿರದ ಕಾರಣ ಟಿಕೆಟ್ ತಪ್ಪಿದೆ ಎನ್ನುವ ಅಂಶವನ್ನು ಅಲ್ಲಗಳೆಯುವ ಭಟ್, ಅವರ ಮಗ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಗ್ಗೆ ಮಾತಾಡದೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರರ ಗುಣಗಾನ ಮಾಡುತ್ತಾರೆ.
ಮೈಸೂರು: ಬಿಜೆಪಿಯ ಹಿರಿಯ ನಾಯಕರಾದ ಕೆಎಸ್ ಈಶ್ವರಪ್ಪ (KS Eshwarappa) ಮತ್ತು ರಘುಪತಿ ಭಟ್ (Raghupathi Bhat) ಒಂದೇ ದೋಣಿಯ ಪಯಣಿಗರು ಅನ್ನೋದ್ರಲ್ಲಿ ಎರಡು ಮಾತಿಲ್ಲ ಮಾರಾಯ್ರೇ. ಇಬ್ಬರೂ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ. ಒಬ್ಬರು ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದರೆ ಮತ್ತೊಬ್ಬರು ಆ ಶಿಕ್ಷೆಯನ್ನು ಎದುರು ನೋಡುತ್ತಿದ್ದಾರೆ. ವಿಷಯವೇನೆಂದರೆ, ನೈಋತ್ಯ ಪದವೀಧರ ಕ್ಷೇತ್ರದಿಂದ (South-West Graduates Constituency) ಸ್ಪರ್ಧಿಸುವ ಹೆಬ್ಬಯಕೆಯನ್ನು ಮಾಜಿ ಶಾಸಕ ರಘುಪತಿ ಭಟ್ ಇಟ್ಟುಕೊಂಡಿದ್ದರು. ಅದರೆ ಪಕ್ಷ ಧನಂಜಯ ಅವರಿಗೆ ಟಿಕೆಟ್ ನೀಡಿದೆ, ಪಕ್ಷದ ನಿರ್ಧಾರದಿಂದ ರೊಚ್ಚಿಗೆದ್ದಿರುವ ಭಟ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ತನಗೆ ಟಿಕೆಟ್ ವಂಚಿಸಿದ್ದು ಭೌಗೋಳಿಕ ಅನ್ಯಾಯ ಮತ್ತು ಕಾರ್ಯಕರ್ತರಿಗೆ ಆಗಿರುವ ದ್ರೋಹ ಎನ್ನುವ ಭಟ್, ತನ್ನನ್ನು ಪಕ್ಷದಿಂದ ಉಚ್ಚಾಟಿಸಿದರೂ ಸ್ಪರ್ಧೆಯಿಂದ ಹಿಂತೆಗೆಯಲ್ಲ ಎಂದು ದೃಢವಾಗಿ ಹೇಳುತ್ತಾರೆ. ಬಿಎಸ್ ಯಡಿಯೂರಪ್ಪರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿರದ ಕಾರಣ ಟಿಕೆಟ್ ತಪ್ಪಿದೆ ಎನ್ನುವ ಅಂಶವನ್ನು ಅಲ್ಲಗಳೆಯುವ ಭಟ್, ಅವರ ಮಗ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಗ್ಗೆ ಮಾತಾಡದೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರರ ಗುಣಗಾನ ಮಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರಾವಳಿಯಲ್ಲಿ ಗುಪ್ತವಾಗಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದೆ: ಶಾಸಕ ರಘುಪತಿ ಭಟ್ ಗಂಭೀರ ಆರೋಪ