AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 1 ತಿಂಗಳಲ್ಲಿ ಡಿಕೆಶಿ ಸಾಕಷ್ಟು ಕನಸಿನ ಯೋಜನೆ, ಹತ್ತಾರು ಸವಾಲುಗಳನ್ನ ಮೆಟ್ಟಿ ಆಡಳಿತಕ್ಕೆ ಚುರುಕು

ಕೇವಲ 1 ತಿಂಗಳಲ್ಲಿ ಡಿಕೆಶಿ ಸಾಕಷ್ಟು ಕನಸಿನ ಯೋಜನೆ, ಹತ್ತಾರು ಸವಾಲುಗಳನ್ನ ಮೆಟ್ಟಿ ಆಡಳಿತಕ್ಕೆ ಚುರುಕು

ರಮೇಶ್ ಬಿ. ಜವಳಗೇರಾ
|

Updated on: Jul 03, 2026 | 8:09 PM

Share

ಮುಖ್ಯಾಂಶಗಳು

  • ಒಂದು ತಿಂಗಳು ಪೂರೈಸಿದ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ
  • ಡಿಕೆಶಿ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ಬರೋಬ್ಬರಿ ಒಂದು ತಿಂಗಳು
  • 1 ತಿಂಗಳಲ್ಲಿ ಹತ್ತಾರು ಸವಾಲುಗಳನ್ನ ಮೆಟ್ಟಿ ಆಡಳಿತಕ್ಕೆ ಚುರುಕು ನೀಡಿದ ಡಿಕೆಶಿ

ನೂರಾರು ಸವಾಲು.. ಸಾಕಷ್ಟು ಸಮಸ್ಯೆಗಳು‌.‌. ಹಿರಿಯರು, ಕಿರಿಯರು ಒತ್ತಡ.. ತಮ್ಮ ಆಡಳಿತದಲ್ಲಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕೆಂಬ ಆಸೆ. ಇಷ್ಟೆಲ್ಲಾ ಮನದಲ್ಲಿಟ್ಟುಕೊಂಡ ಡಿಕೆ ಶಿವಕುಮಾರ್ (DK Shivakumar), ತಾವು ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿಕೊಂಡು ಇಂದಿಗೆ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಇದೊಂದು ತಿಂಗಳಲ್ಲಿ ಸಿಎಂ ಡಿಕೆ, ತೆಗೆದುಕೊಂಡ ನಿರ್ಧಾರ, ಎದುರಿಸಿದ ಸಮಸ್ಯೆ, ಸವಾಲುಗಳು ಸಾಕಷ್ಟಿದ್ದರೂ ಆಡಳತಕ್ಕೆ ಹಾಕಿದ ಅಡಿಪಾಯ ರಾಜ್ಯದ ಜನರ ಗಮನ ಸೆಳೆದಿದೆ.

ಬೆಂಗಳೂರು, (ಜುಲೈ 03): ನೂರಾರು ಸವಾಲು.. ಸಾಕಷ್ಟು ಸಮಸ್ಯೆಗಳು‌.‌. ಹಿರಿಯರು, ಕಿರಿಯರು ಒತ್ತಡ.. ತಮ್ಮ ಆಡಳಿತದಲ್ಲಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕೆಂಬ ಆಸೆ. ಇಷ್ಟೆಲ್ಲಾ ಮನದಲ್ಲಿಟ್ಟುಕೊಂಡ ಡಿಕೆ ಶಿವಕುಮಾರ್ (DK Shivakumar), ತಾವು ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿಕೊಂಡು ಇಂದಿಗೆ ಬರೋಬ್ಬರಿ ಒಂದು ತಿಂಗಳು ಕಳೆದಿದೆ. ಇದೊಂದು ತಿಂಗಳಲ್ಲಿ ಸಿಎಂ ಡಿಕೆ, ತೆಗೆದುಕೊಂಡ ನಿರ್ಧಾರ, ಎದುರಿಸಿದ ಸಮಸ್ಯೆ, ಸವಾಲುಗಳು ಸಾಕಷ್ಟಿದ್ದರೂ ಆಡಳತಕ್ಕೆ ಹಾಕಿದ ಅಡಿಪಾಯ ರಾಜ್ಯದ ಜನರ ಗಮನ ಸೆಳೆದಿದೆ.

ಸರ್ಕಾರಕ್ಕೆ ತಿಂಗಳ ಸಂಭ್ರಮದ‌ ನಡುವೆ ಸಿಎಂ ಡಿಕೆ ಶಿವಕುಮಾರ್, ತಮ್ಮ ಪತ್ನಿ, ಸಹೋದರ ಡಿಕೆ ಸುರೇಶ್ ಸಹಿತ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ. ಹಾಗೆಯೇ ಸರ್ಕಾರಕ್ಕೆ ತಿಂಗಳ ಸಂಭ್ರಮ ಮತ್ತು ತಾವು ಈ ಒಂದು ತಿಂಗಳಲ್ಲಿ ಮಾಡಿದ ಕೆಲಸ ಕಾರ್ಯದ ಬಗ್ಗೆ ಚರ್ಚೆ ನಡೆಸಿದರು. ಇದೇ ವೇಳೆ ಸಂಪುಟ ಪುನಾರಚನೆ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಅಷ್ಟಕ್ಕೂ ಡಿಕೆ ಶಿವಕುಮಾರ್ ಸರ್ಕಾರ, ಇದೊಂದು ತಿಂಗಳಲ್ಲಿ ಏನೆಲ್ಲಾ ಮಾಡಿದೆ ಎನ್ನುವ ಡಿಟೇಲ್ಸ್ ವಿಡಿಯೋನಲ್ಲಿದೆ.

ಕರ್ನಾಟಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us