AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಡೋಕೆ ಬಹಳ ಕೆಲಸ ಇದೆ, ನಾನ್ಯಾಕೆ ರಾಜೀನಾಮೆ ಕೊಡ್ಲಿ? ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಮಾಡೋಕೆ ಬಹಳ ಕೆಲಸ ಇದೆ, ನಾನ್ಯಾಕೆ ರಾಜೀನಾಮೆ ಕೊಡ್ಲಿ? ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2025 | 9:25 PM

Share

KPCC president DK Shivakumar says no situation arose for giving resignation: ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಡಿಕೆಶಿ ಅವರೇ ರಿಯಾಕ್ಟ್ ಮಾಡಿದ್ದಾರೆ. ಕಾಂಗ್ರೆಸ್ ಕಚೇರಿ ಸ್ಥಾಪನೆಗೆ ಭೂಮಿ ಪೂಜೆ, ಕಾಂಗ್ರೆಸ್ ಸಂಸ್ಥಾಪನಾ ದಿನ ಇತ್ಯಾದಿ ಕಾರ್ಯಗಳಿವೆ. ಅವುಗಳನ್ನು ತಾನೇ ಮಾಡಬೇಕು. ಈಗ ಯಾಕೆ ರಾಜೀನಾಮೆ ನೀಡಲಿ ಎಂದಿದ್ದಾರೆ.

ಬೆಂಗಳೂರು, ನವೆಂಬರ್ 16: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ (DK Shivakumar) ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರೇ ಸ್ವತಃ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತನ್ನ ಮಾನಸಿಕ ಆರೋಗ್ಯ ಚೆನ್ನಾಗಿಯೇ ಇದೆ. ಕೆಪಿಸಿಸಿ ಅಧ್ಯಕ್ಷರಾಗಿ ಮಾಡಬೇಕಾದ ಕೆಲಸ ತುಂಬಾ ಇದೆ. ತಾನ್ಯಾಕೆ ರಾಜೀನಾಮೆ ನೀಡಲಿ ಎಂದು ಮಾಧ್ಯಮದವರನ್ನು ಡಿಕೆ ಶಿವಕುಮಾರ್ ಕೇಳಿದ್ದಾರೆ.

‘ನನಗೆ ಮೆಂಟಲ್ ಹೆಲ್ತು, ಫಿಸಿಕಲ್ ಹೆಲ್ತು ಮತ್ತು ಪೊಲಿಟಿಕಲ್ ಹೆಲ್ತು ಎಲ್ಲಾ ಕರೆಕ್ಟಾಗೇ ಇದೆ’ ಎಂಬುದು ಉಪಮುಖ್ಯಮಂತ್ರಿಯೂ ಆದ ಡಿಕೆ ಶಿವಕುಮಾರ್ ಅವರ ಮೊದಲ ರಿಯಾಕ್ಷನ್ ಆಗಿತ್ತು. ನಂತರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮಾಡಬೇಕಾದ ಕೆಲಸಗಳನ್ನು ಉಲ್ಲೇಖಿಸಿದರು.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ತವರು ಚಿತ್ತಾಪುರದಲ್ಲಿ RSS ಅದ್ಧೂರಿ ಪಥಸಂಚಲನ: ಹೈಸೆಕ್ಯುರಿಟಿ ನಡುವೆ ಹೆಜ್ಜೆ ಹಾಕಿದ ಗಣವೇಷಧಾರಿಗಳು 

‘ನಾನು ಈಗ ಖರ್ಗೆ ಸಾಹೇಬ್ರುನೇ ನೋಡೋಕೆ ಹೋಗ್ತಾ ಇದೀನಿ. ಡಿಸೆಂಬರ್ ಒಳಗೆ ಕಾಂಗ್ರೆಸ್ ಕಚೇರಿಗೆ ಭೂಮಿಪೂಜೆ ಮಾಡಲೇಬೇಕು. ಅದಕ್ಕೆ ನಾನು ಡೇಟ್ ಫಿಕ್ಸ್ ಬೇರೆ ಮಾಡಬೇಕಿದೆ. ಈ ಎಲೆಕ್ಷನ್ ಆಗ್ಲೀ (ಬಿಹಾರ) ಅಂತ ಸುಮ್ನೆ ಇದ್ದೆ. ಈಗ ಅವರಿಗೆ ಪಾರ್ಲಿಮೆಂಟ್ ಸೆಷನ್ ಶುರುವಾಗ್ತಾ ಇದೆ. ಗಾಂಧಿ ಭಾರತ ಅನ್ನೋ ಒಂದು ಪುಸ್ತಕ ಬೇರೆ ಬರೆದಿದ್ದೀನಿ. 100 ವರ್ಷದ ಹಿಂದೆ ಯಾವ ರೀತಿ ಅಧಿವೇಶನ ಆಯಿತು, ಈಗ ನಾವು ಯಾವ ರೀತಿ ಅಧಿವೇಶನ ಮಾಡುತ್ತೇವೆ. ಖರ್ಗೆ ಸಾಹೇಬ್ರು ಅಧ್ಯಕ್ಷರಾದ ಮೇಲೆ ಏನಾಯ್ತು, ಇದೆಲ್ಲದರ ಬಗ್ಗೆ ನಂದೇ ಆದ ವಿಚಾರ ಬರೆದಿದ್ದೀನಿ. ಅವೆಲ್ಲ ಡೇಟ್ ಫಿಕ್ಸ್ ಮಾಡಬೇಕು. ಡಿಸೆಂಬರ್​ನಲ್ಲಿ ಅವರು ಫುಲ್ ಬ್ಯುಸಿ ಆಗಿಬಿಡ್ತಾರೆ. ಈಗ ಮಧ್ಯದಲ್ಲಿ ಟೈಮ್ ತಗೋಬೇಕು. ಫೌಂಡೇಶನ್ ಡೇ ಬೇರೆ ಇದೆ. ಬೇರೆ ಬೇರೆಲ್ಲಾ ದಿನ ಇದೆ. ಅವೆಲ್ಲಾ ಯಾರು ಮಾಡೋದು. ನಾನೇ ಮಾಡಬೇಕು. ನಾನ್ಯಾಕೆ ರಾಜೀನಾಮೆ ಕೊಡ್ತೀನಿ ಅಂತ ಹೇಳಿ. ಆ ಸಂದರ್ಭ ಏನು ಉದ್ಭವ ಆಗಿಲ್ಲ’ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ