ರಾಜಣ್ಣ ಆಡಿರುವ ಮಾತಿಗೆ ಪ್ರತಿಕ್ರಿಯೆ ಕೇಳಿದಾಗ ಡಿಕೆ ಶಿವಕುಮಾರ್, ಕೇರಳ ಹೋಗ್ತಿದ್ದೀನಿ, ಆಮೇಲೆ ಮಾತಾಡ್ತೀನಿ ಎಂದರು!
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿರುವ ರಾಜಣ್ಣ, ಅವರಿಗೇನು ಎರಡು ಕೊಂಬುಗಳಿವೆಯಾ, ಅವರು ಶಿಶುಪಾಲರಾದರೆ ತಾನು ಶ್ರೀಕೃಷ್ಣ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಗಳಾಗಿರುವ ಕೆಲವರು ತಮ್ಮ ಇಲಾಖೆಯ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಬಾರದು ಎನ್ನುವ ಕಾರಣಕ್ಕೆ ವಿಷಯಾಂತರ ಮಾಡಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತಾಡುತ್ತಾರೆ ಅನಿಸುತ್ತದೆ.
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಹಕಾರ ಸಚಿವ ಕೆಎನ್ ರಾಜಣ್ಣ ಒಂದೇ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿದ್ದರೂ ಇಬ್ಬರ ನಡುವೆ ಎಣ್ಣೆ ಸೀಗೇಕಾಯಿ ಸಂಬಂಧ. ರಾಜಣ್ಣ ಇಂದು ಬೆಳಗ್ಗೆ ನೇರವಾಗಿ ಶಿವಕುಮಾರ್ ಅವರನ್ನು ಕೆಣಕಿ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳೋದು ಬೇಡ ಅಂತ ಕೆಪಿಸಿಸಿ ಅಧ್ಯಕ್ಷ ತನ್ನನ್ನು ಎಚ್ಚರಿಕೆ ನೀಡುವಂತಿಲ್ಲ, ದುರ್ಬಳಕೆ ಮಾಡಿಕೊಂಡಿಲ್ಲ ಎಂದಿದ್ದಾರೆ. ಮಾಧ್ಯಮದವರು ಇದೇ ಸಂಬಂಧ ಪ್ರಶ್ನೆ ಕೇಳಿದಾಗ, ಶಿವಕುಮಾರ್ ಬೇರೇನೋ ಉತ್ತರಿಸುತ್ತಾರೆ. ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಕೇರಳ ಹೋಗುತ್ತಿದ್ದೇನೆ ಮತ್ತು ನಾಳೆ ರಾಜಸ್ತಾನದಲ್ಲಿ ಅಖಿಲ ಭಾರತ ಸಚಿವರ ಸಮ್ಮೇಳನವೊಂದಿದೆ, ಅದರಲ್ಲಿ ಭಾಗಿಯಾಗಿ ಬಂದಮೇಲೆ ಮಾತಾಡುತ್ತೇನೆ ಎಂದು ಶಿವಕುಮಾರ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಎಐಸಿಸಿ ಹೆಸರು ದುರ್ಬಳಕೆ ಮಾಡುವುದು ಬೇಡ: ಡಿಸಿಎಂ ಡಿಕೆ ಶಿವಕುಮಾರ್ಗೆ ಸಚಿವ ಕೆಎನ್ ರಾಜಣ್ಣ ಖಡಕ್ ತಿರುಗೇಟು