‘ಆ ಕಂಟಕ ಕಳೆಯಲಿ ಅಂತ ಪೂಜೆ ಮಾಡುತ್ತಿದ್ದೇವೆ’: ಎಲ್ಲವನ್ನೂ ವಿವರಿಸಿದ ದೊಡ್ಡಣ್ಣ
ಕನ್ನಡ ಚಿತ್ರರಂಗದ ಕಲಾವಿದರ ಸಂಘದ ಕಟ್ಟಡದಲ್ಲಿ ಆಗಸ್ಟ್ 14ರಂದು ಪೂಜೆ ಮಾಡಲಾಗುತ್ತಿದೆ. ಈ ಪೂಜೆ, ಹೋಮ ಮಾಡುವುದರ ಹಿಂದಿನ ಉದ್ದೇಶ ಏನು ಎಂಬುದನ್ನು ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ. ರಾಕ್ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಅವರ ನೇತೃತ್ವದಲ್ಲಿ ಪೂಜೆ ನಡೆಯಲಿದೆ. ಈಗಾಗಲೇ ಸಕಲ ತಯಾರಿ ನಡೆದಿದೆ. ಆ ಬಗ್ಗೆ ದೊಡ್ಡಣ್ಣ ಮಾತನಾಡಿದ್ದಾರೆ.
‘ಪ್ರಕಾಶ್ ಅಮ್ಮಣ್ಣಯ್ಯ ಅವರು 4 ವರ್ಷದ ಹಿಂದೆ ಒಂದು ಮಾತು ಹೇಳಿದ್ದರು. ಚಿತ್ರರಂಗಕ್ಕೆ ಬಹಳ ಕಂಟಕ ಇದೆ. ಸಾವು-ನೋವುಗಳು ಇರಲಿವೆ. ಇದನ್ನು ತಪ್ಪಿಸಲು ಸರ್ಪಶಾಂತಿ ಹಾಗೂ ಮೃತ್ಯುಂಜಯ ಹೋಮ ಮಾಡಿಸಬೇಕು ಅಂತ ಹೇಳಿದ್ದರು. 600 ಜನರಿಗೆ ಊಟದ ವ್ಯವ್ಯಸ್ಥೆ ಮಾಡಿಸಿದ್ದೇವೆ. ಅನ್ನಶಾಂತಿ ಆದಲ್ಲಿ ಶಾಂತಿ, ಸುಖ ನೆಲೆಸುತ್ತದೆ. ಬೆಳಗ್ಗೆ 7 ಗಂಟೆಗೆ ಸಂಕಲ್ಪ ಪೂಜೆ ಮಾಡಲಾಗುತ್ತದೆ. ಬಹಳ ನೇಮನಿಷ್ಠಯಿಂದ ಈ ಪೂಜೆ ಮಾಡಿಸುತ್ತೇವೆ. ಎಲ್ಲ ವ್ಯವಸ್ಥೆ ಆಗಿದೆ. ಗಣಪತಿ ಹೋಮ, ಮೃತ್ಯಂಜಯ ಹೋಮ, ಆಶ್ಲೇಷ ಬಲಿ, ಕಾರ್ತಿವೀರಾರ್ಜುನ ಮಂತ್ರಮಠಣ ಮಾಡುತ್ತಾರೆ. ಇಡೀ ಚಿತ್ರರಂಗ ಒಂದು ಕುಟುಂಬ. ಇದು ಒಬ್ಬರಿಗೆ ಸೀಮಿತವಾಗಿದ್ದಲ್ಲ. ಎಲ್ಲರಿಗೂ ಒಳ್ಳೆಯದು ಆಗಲಿ ಎಂಬ ಉದ್ದೇಶದಿಂದ ಪೂಜೆ ಮಾಡಲಾಗುತ್ತಿದೆ’ ಎಂದು ದೊಡ್ಡಣ್ಣ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos