ಸಚಿವ ಜಮೀರ್ ಅಹ್ಮದ್ ಹೇಳಿದಂತೆ ಕುಣಿಯುತ್ತಿದ್ದಾರೆಂದು ಅಧಿಕಾರಿಗಳನ್ನು ಎಚ್ಚರಿಸಿದ ಪ್ರಲ್ಹಾದ್ ಜೋಶಿ

|

Updated on: Nov 01, 2024 | 3:57 PM

ವಕ್ಫ್ ಭೂವಿವಾದ ಒಂದು ವಿಷಯವೇ ಅಲ್ಲ, ರೈತರಿಗೆ ನೀಡಿರುವ ನೋಟೀಸ್​ಗಳನ್ನು ವಾಪಸ್ಸು ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರು ಹೇಳಿದಾಗ್ಯೂ ವಿವಾದ ಕೊನೆಗಾಣಿತ್ತಿಲ್ಲ ಮತ್ತು ನೋಟೀಸ್​ಗಳನ್ನು ನೀಡುವ ಕಾರ್ಯ ಮುಂದುವರಿದಿದೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಮಾತ್ರ ಒಂದು ಸ್ಪಷ್ಟ ಚಿತ್ರಣ ಸಿಗಬಹುದು

ಹುಬ್ಬಳ್ಳಿ: ಹಾವೇರಿ ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿಗಳು ವಕ್ಫ್ ಭೂವಿವಾದ ಕುರಿತಂತೆ ಸಚಿವ ಜಮೀರ್ ಅಹ್ಮದ್ ಖಾನ್ ಆದೇಶದ ಮೇರೆಗೆ ರೈತರಿಗೆ ನೋಟೀಸ್​ಗಳನ್ನು ನೀಡುತ್ತಿರುದನ್ನು ಉಗ್ರವಾಗಿ ಖಂಡಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಜಮೀರ್ ಒಂದು ಮತಾಂಧ ಶಕ್ತಿ, ಅವರು ಹೇಳಿದ ತಾಳಕ್ಕೆ ಅಧಿಕಾರಿಗಳು ಕುಣಿಯುತ್ತಿದ್ದಾರೆ, ಈ ಪ್ರಕರಣ ಸುಪ್ರೀಂ ಕೋರ್ಟ್​​​ವರೆಗೆ ಹೋಗಲಿದೆ , ಡಿಸಿ ಮತ್ತು ಸಿಈಓಗಳು ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಿದೆ ಎಂಬುದು ಕಾಂಗ್ರೆಸ್​ಗೆ ಈಗ ಗೊತ್ತಾಗಿದೆ; ಪ್ರಲ್ಹಾದ್ ಜೋಶಿ ಲೇವಡಿ

Follow us on