Loading video

ಕೋವಿಡ್ ಸಮಯದ ಹಗರಣ ಆರೋಪ; ಸರ್ಕಾರ ಯಾರ‍್ಯಾರಿಂದ ತನಿಖೆ ಮಾಡಿಸುತ್ತೋ? ಡಾ ಕೆ ಸುಧಾಕರ್

Updated on: Nov 15, 2024 | 5:20 PM

ಪಿಪಿಈ ಕಿಟ್ ಗಳನ್ನು ರಾಜ್ಯಕ್ಕೆ ತರಿಸಿದಾಗ ಬಿಎಸ್ ಯಡಿಯೂರಪ್ಪ ಸಿಎಂ ಮತ್ತು ಬಿ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದರು. ಕಿಟ್ ತರಿಸುವ ನಿರ್ಧಾರ ಏಕಾಏಕಿ ತೆಗೆದುಕೊಂಡಿದ್ದಲ್ಲ, ತಾಂತ್ರಿಕ ಸಮಿತಿ ಮತ್ತು ಟಾಸ್ಕ್ ಫೋರ್ಸ್ ಜೊತೆ ಚರ್ಚೆ ನಡೆಸಿ ಕೇಂದ್ರ ಸರ್ಕಾರದಿಂದ ವಿಶೇಷ ವಿಮಾನ ಚೀನಾಗೆ ಕಳಿಸಿ ತರಿಸಿದ್ದು, ಆಗ ಕೇವಲ ಕರ್ನಾಟಕದಲ್ಲಿ ಮಾತ್ರ ಕಿಟ್ ಲಭ್ಯವಿದ್ದವು ಎಂದು ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ: ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಸಂಸದ ಡಾ ಕೆ ಸುಧಾಕರ್ ಕೋವಿಡ್ ಸಮಯದಲ್ಲಿ ಪಿಪಿಈ ಕಿಟ್ ಗಳನ್ನು ಖರೀದಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರ ಎಷ್ಟು ಜನರಿಂದ ತನಿಖೆ ನಡೆಸುತ್ತದೆಯೋ ಗೊತ್ತಾಗುತ್ತಿಲ್ಲ, ಮೊದಲು ನ್ಯಾಯಮೂರ್ತಿ ಕುನ್ಹಾ ಅವರ ಆಯೋಗದಿಂದ ತನಿಖೆ ಮಾಡಿಸಿದರು, ಆಯೋಗ ಪ್ರಾಥಮಿಕ ವರದಿ ಸಲ್ಲಿಸುತ್ತಿದ್ದಂತೆಯೇ ಅದರ ಆಧಾರದ ಮೇಲೆ ತನಿಖೆ ನಡೆಸಲು ಡಿಕೆ ಶಿವಕುಮಾ್​ ನೇತೃತ್ವದಲ್ಲಿ ಮತ್ತೊಂದು ಸಮಿತಿಯ ರಚನೆಯಾಯಿತು, ಈಗ ಒಂದು ಎಸ್​ಐಟಿಯನ್ನೂ ರಚಿಸಲಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೋವಿಡ್ ಹಗರಣ: ಹೆಚ್ಚಿನ ‌ಕ್ರಮ ಕೈಗೊಳ್ಳಲು ಡಿಕೆ ಶಿವಕುಮಾರ್​ ನೇತೃತ್ವದ ಉಪ ಸಮಿತಿ ರಚನೆ