ತಮ್ಮ ಪಕ್ಷದವರನ್ನು ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಒಗ್ಗಟ್ಟನ್ನು ಕೊಂಡಾಡಿದ ಸಂಸದ ಸುಧಾಕರ್

|

Updated on: Nov 30, 2024 | 4:51 PM

ಬಣಗಳು ಎಲ್ಲ ಪಕ್ಷಗಳಲ್ಲಿರುತ್ತವೆ, ಅಧಿಕಾರವಿದ್ದಾಗ ಒಂದು ಬಣ ಇಲ್ಲದಾಗ ಮತ್ತೊಂದು ಬಣ, ಕಾಂಗ್ರೆಸ್ ಪಕ್ಷದಲ್ಲಿ ಬಣಗಳಿಲ್ಲವೇ? ಹಿರಿಯ ಸಚಿವರಾಗಿರುವ ಕೆಹೆಚ್ ಮುನಿಯಪ್ಪ ಅವರು ಸಹ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ, ಹಾಗಂತ ಅವರದ್ದೊಂದು ಬಣ ಹೇಳಲಾಗದು ಎಂದು ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ: ಬಿಜೆಪಿ ನಾಯಕರ ಜಗಳಗಳನ್ನು ಕುರಿತು ಮಾತಾಡುವ ಭರದಲ್ಲಿ ಸಂಸದ ಡಾ ಕೆ ಸುಧಾಕರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ನಡುವಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಒಗ್ಗಟ್ಟಿನಿಂದ ಸರ್ಕಾರ ನಡೆಸುತ್ತಿರುವುದನ್ನು ಮನಸಾರೆ ಕೊಂಡಾಡಿದರು. ತಮ್ಮ ಪಕ್ಷದಲ್ಲಿ ಅಂಥ ಒಗಟ್ಟು ಯಾವಾಗ ಬರುತ್ತೋ ಗೊತ್ತಾಗುತ್ತಿಲ್ಲ, ಪಕ್ಷದ ರಾಷ್ಟ್ರೀಯ ನಾಯಕರು ಎಂದು ಇತ್ತ ಗಮನಹರಿಸಿ ಶಿಸ್ತನ್ನು ಪಕ್ಷಕ್ಕೆ ವಾಪಸ್ಸು ತರುತ್ತಾರೋ ಅಂತ ಎಲ್ಲರೂ ಕಾದು ನೋಡುತ್ತಿದ್ದಾರೆ, ಹಾಗೆ ನೋಡಿದರೆ ತಮ್ಮ ಪಕ್ಷದಲ್ಲಿ ಒಗ್ಗಟ್ಟು ಕಾಂಗ್ರೆಸ್ ಪಕ್ಷಕ್ಕಿಂತ ದುಪ್ಪಟ್ಟಿರಬೇಕು, ಅದು ಇದ್ದಿದ್ದರೆ ಅಧಿಕಾರದಲ್ಲಿರುವ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ಯಾವತ್ತೋ ಕಿತ್ತೊಗೆಯಬಹುದಿತ್ತು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೋವಿಡ್ ಸಮಯದ ಹಗರಣ ಆರೋಪ; ಸರ್ಕಾರ ಯಾರ‍್ಯಾರಿಂದ ತನಿಖೆ ಮಾಡಿಸುತ್ತೋ? ಡಾ ಕೆ ಸುಧಾಕರ್