ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಹೆಸರು ಅಧಿಕೃತ ಘೋಷಣೆ

Edited By:

Updated on: Aug 13, 2026 | 12:39 PM

ವಿಧಾನ ಪರಿಷತ್ತಿನ ಕಲಾಪ ಆರಂಭವಾಗುತ್ತಿದ್ದಂತೆ, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ನೂತನ ಸಭಾ ನಾಯಕರೆಂದು (Leader of the House) ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ವಿಧಾನ ಪರಿಷತ್​​ನಿಂದ ಯತೀಂದ್ರ ಸಿದ್ದರಾಮಯ್ಯ ಮಾತ್ರ ಏಕೈಕ ಸಚಿವರಾಗಿರುವ ಕಾರಣ ಅವರಿಗೇ ಸಭಾ ನಾಯಕ ಸ್ಥಾನ ಸಿಗೋದು ಬಹುತೇಕ ನಿಶ್ಚಿತ ಎಂದು ಈ ಹಿಂದೆಯೇ ಟಿವಿ9 ಕೂಡ ವರದಿ ಮಾಡಿತ್ತು.

ಬೆಂಗಳೂರು, ಆಗಸ್ಟ್​​ 13: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ವಿಧಾನ ಪರಿಷತ್​​ ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ನೂತನ ಸಭಾ ನಾಯಕರೆಂದು ಹಂಗಾಮಿ ಸಭಾಪತಿ ಪುಟ್ಟಣ್ಣ ಘೋಷಣೆ ಮಾಡಿದ್ದಾರೆ. ಆ ಬಳಿಕ ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಯತೀಂದ್ರ ಅವರು, ಮೊದಲ ಬಾರಿ ಸಚಿವನಾಗಿ, ಸಭಾನಾಯಕನಾಗಿ ಆಯ್ಕೆ ಆಗಿದ್ದೇನೆ. ಅನುಭವ ಕಡಿಮೆ ಇರುವ ಕಾರಣ ಏನಾದರೂ ತಪ್ಪಾದರೆ ಸರಿಪಡಿಸಿ ಮಾರ್ಗದರ್ಶನ ನೀಡುವಂತೆ ಆಡಳಿತ ಮತ್ತು ವಿಪಕ್ಷ ಸದಸ್ಯರನ್ನು ಅವರು ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Aug 13, 2026 12:36 PM
Loading...
Unable to load recommendations.
Follow Us