ಬೆಳಗಾವಿ ವಿಭಜನೆಯಲ್ಲಿ ಬೈಲಹೊಂಗಲವನ್ನು ಜಿಲ್ಲಾಕೇಂದ್ರವಾಗಿ ಘೋಷಿಸದಿದ್ದರೆ ರಕ್ತಪಾತವಾದೀತು: ಹೋರಾಟಗಾರರ ಎಚ್ಚರಿಕೆ
ಬೈಲಹೊಂಗಲ ಬ್ರಿಟಿಷರ ಕಾಲದಿಂದಲೂ ಕೇಂದ್ರ ಸ್ಥಾನವಾಗಿ ಗುರುತಿಸಿಕೊಡು, ಉಪ-ವಿಭಾಗವಾಗಿಯೂ ಪರಿಣಿಸಲ್ಪಟ್ಟಿತ್ತು. ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮ ನೀಡಿದ ಸ್ಥಳವಾಗಿದೆ. ಬೈಲಹೊಂಗಲ ಜಿಲ್ಲೆಯಾಗಬೇಕೆಂಬ ಕೂಗು ದಶಕಗಳಿಂದ ಕೇಳಿಬರುತ್ತಿದೆ ಎಂದು ನಿವಾಸಿಗಳು ಹೇಳುತ್ತಾರೆ.
ಬೆಳಗಾವಿ: ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ (Belagavi Division) ಕೂಗು ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಇತ್ತೀಚಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಜಿಲ್ಲೆಯನ್ನು ವಿಭಜಿಸಿ ಗೋಕಾಕ (Gokak) ಮತ್ತು ಚಿಕ್ಕೋಡಿಗಳನ್ನು (Chikkodi) ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸುವ ಪ್ರಸ್ತಾಪದ ಬಗ್ಗೆ ಹೇಳಿದ್ದು ಬೈಲಹೊಂಗಲ (Bailhongal) ನಿವಾಸಿಗಳನ್ನು ಕೆರಳಿಸಿದೆ. ಅವರ ವಾದವೇನಂದರೆ, ಬೈಲಹೊಂಗಲ ಬ್ರಿಟಿಷರ ಕಾಲದಿಂದಲೂ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡ, ಉಪ-ವಿಭಾಗವಾಗಿಯೂ ಪರಿಣಿಸಲ್ಪಟ್ಟಿತ್ತು. ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮ ನೀಡಿದ ಸ್ಥಳವಾಗಿದೆ. ಬೈಲಹೊಂಗಲ ಜಿಲ್ಲೆಯಾಗಬೇಕೆಂಬ ಕೂಗು ದಶಕಗಳಿಂದ ಕೇಳಿಬರುತ್ತಿದೆ ಎಂದು ಹೇಳುವ ನಿವಾಸಿಗಳು, ಬೆಳಗಾವಿಯನ್ನು ವಿಭಜಿಸುವಾಗ ಸರ್ಕಾರ ಬೈಲಹೊಂಗಲವನ್ನು ನಿರ್ಲಕ್ಷಿದರೆ ಉಗ್ರ ಹೋರಾಟ ನಡೆಯುತ್ತದೆ ಮತ್ತು ಆ ಸಂದರ್ಭದಲ್ಲಿ ರಕ್ತಪಾತವಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಸುತ್ತಾರೆ. ಅಸಲಿಗೆ ಬೆಳಗಾವಿ ಜಿಲ್ಲೆ ವಿಭಜನೆಯ ಪ್ರಸ್ತಾಪವೇ ಸರಿಯಲ್ಲ, ಅದು ಇಬ್ಭಾಗವಾದರೆ ಮರಾಠಿಗರ ಪ್ರಾಬಲ್ಯ ಹೆಚ್ಚಲಿದೆ ಅಂತಲೂ ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ