ತಾಂತ್ರಿಕ ದೋಷ, ಕೋಲಾರ ಕೆರೆಯಲ್ಲಿ ಲ್ಯಾಂಡ್ ಆದ ಹೆಲಿಕಾಪ್ಟರ್; ಕೆಟ್ಟು ನಿಂತ ಸೇನಾ ಹೆಲಿಕಾಪ್ಟರ್ ನೋಡಲು ಜನವೋ ಜನ
ಯಲಹಂಕದಿಂದ ಚೆನೈಗೆ ತೆರಳುತ್ತಿದ್ದ ವಾಯುಸೇನಾ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿತ್ತು. ಆದರೆ ಈಗ 14 ಗಂಟೆಯಾದರೂ ತಾಂತ್ರಿಕ ಸಮಸ್ಯೆ ಸರಿ ಮಾಡಲಾಗಿಲ್ಲ. ಕೆಟ್ಟು ನಿಂತ ಸೇನಾ ಹೆಲಿಕಾಪ್ಟರ್ ನೋಡಲು ತಂಡೋಪತಂಡವಾಗಿ ಜನರು ಆಗಮಿಸುತ್ತಿದ್ದಾರೆ.
ಕೋಲಾರ, ಸೆ.30: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕರಪನಹಳ್ಳಿ ಕೆರೆ ಬಳಿ ಕಳೆದ 14 ಗಂಟೆಗಳಿಂದ ಸೇನಾ ಹೆಲಿಕಾಪ್ಟರ್ ಒಂದು ಬಂದು ನಿಂತಿದೆ. ಹೆಲಿಕಾಪ್ಟರ್ ನೋಡಲು ತಂಡೋಪತಂಡವಾಗಿ ಜನರು ಆಗಮಿಸುತ್ತಿದ್ದಾರೆ. ಯಲಹಂಕದಿಂದ ಚೆನೈಗೆ ತೆರಳುತ್ತಿದ್ದ ವಾಯುಸೇನಾ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿತ್ತು. ಆದರೆ ಈಗ 14 ಗಂಟೆಯಾದರೂ ತಾಂತ್ರಿಕ ಸಮಸ್ಯೆ ಸರಿ ಮಾಡಲಾಗಿಲ್ಲ. ಸೇನಾ ಹೆಲಿಕಾಪ್ಟರ್ ರಾತ್ರಿಯಿಡಿ ಕೆರೆಯಲ್ಲೆ ಇದೆ. ಸದ್ಯ ಅಧಿಕಾರಿಗಳು ಹೆಲಿಕಾಪ್ಟರ್ಗೆ ಟಾರ್ಪಲ್ ಹೊದಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಮಧ್ಯಾಹ್ನದ ವೇಳೆಗೆ ತಾಂತ್ರಿಕ ಸಮಸ್ಯೆ ಸರಿಹೋಗುವ ಸಾಧ್ಯತೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:02 am, Mon, 30 September 24